ಮೊಬೈಲ್ ಫೋನ್ ಬಳಕೆ ಪ್ರಶ್ನಿಸಿದ ತಾಯಿಯ ತಲೆಗೆ ಹೊಡೆದು ಕೊಲೆಗೆ ಯತ್ನ

ಹೊಸದುರ್ಗ: ಮಧ್ಯರಾತ್ರಿ ಕಳೆದರೂ ಮೊಬೈಲ್ ಫೋನ್‌ನಲ್ಲೇ ತಲ್ಲೀನನಾ ದುದನ್ನು ಪ್ರಶ್ನಿಸಿದ ತಾಯಿಯನ್ನು  ಮಗ ಮರದ ಹಲಗೆಯಿಂದ ತಲೆಗೆ ಹೊಡೆದು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ.  ನೀಲೇಶ್ವರ ಬಳಿಯ ಕಣಿಚ್ಚಿರಕಾವು ಎಂಬಲ್ಲಿಗೆ ಸಮೀಪದ ರಾಜನ್‌ರ ಪತ್ನಿ ರುಕ್ಮಿಣಿ (೬೪) ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಪರಿ ಯಾರಂ ಮೆಡಿಕಲ್ ಕಾಲೇಜು ಆಸ್ಪ ತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖ ಲಿಸಲಾಗಿದೆ.  ಈ ಘಟನೆಗೆ ಸಂಬಂಧಿಸಿ  ಹತ್ಯೆಯತ್ನ ಕೇಸು ದಾಖಲಿಸಿಕೊಂಡ ಪೊಲೀಸರು ಪುತ್ರ ಸುಜಿತ್‌ನನ್ನು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಇಂದು ಮುಂಜಾನೆ ೪ ಗಂಟೆಗೆ ಈ ಘಟನೆ ನಡೆದಿದೆ. ನಿತ್ಯ ಮದ್ಯಪಾನಿಯಾದ ಪುತ್ರ ಮೊಬೈಲ್ ಫೋನ್‌ನಲ್ಲೇ ತಲ್ಲೀನ ನಾಗುತ್ತಿದ್ದನೆಂದು ಹೇಳಲಾಗುತ್ತಿದೆ. ಮಧ್ಯರಾತ್ರಿ ಕಳೆದರೂ ಸುಜಿತ್ ಮೊಬೈಲ್ ಫೋನ್ ನೋಡುತ್ತಲೇ ಕುಳಿತಿರುವು ದನ್ನು ತಾಯಿ ರುಕ್ಮಿಣಿ ಪ್ರಶ್ನಿಸಿದ್ದರು. ಇದೇ ರೀತಿ ನಿನ್ನೆ ರಾತ್ರಿಯೂ ಪುತ್ರನಿಗೆ ಬುದ್ದಿವಾದ ಹೇಳಿದ್ದರೆನ್ನಲಾಗಿದೆ. ಇದರ ದ್ವೇಷದಿಂದ ನಿದ್ರಿಸುತ್ತಿದ್ದ ರುಕ್ಮಿಣಿಗೆ ಮಗ ಮರದ ಹಲಗೆಯಿಂ ದ ಹೊಡೆದಿರುವುದಾಗಿಯೂ ಇದರಿಂದ  ರುಕ್ಮಿಣಿಯ ಕಣ್ಣು ಹಾಗೂ ತಲೆಗೆ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page