ಮೋದಿ ಮೂರನೇ ಬಾರಿ: ಮಂಜೇಶ್ವರ ಮಂಡಲದ ವಿವಿಧ ಕಡೆಗಳಲ್ಲಿ ಬಿಜೆಪಿಯಿಂದ ವಿಜಯೋತ್ಸವ

ಮಂಜೇಶ್ವರ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಹಾಗೂ ರಾಜ್ಯದಲ್ಲಿ ಪ್ರಥಮ ಬಾರಿ ತಾವರೆಯನ್ನು ಅರಳಿಸಿದ ಸಿನಿಮಾ ನಟ ಸುರೇಶ್ ಗೋಪಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಮಂಡಲದ ವಿವಿಧ ಕಡೆಗಳಲ್ಲಿ  ಬಿಜೆಪಿ ಸಂಭ್ರಮಾಚರಿಸಿದೆ. ಸಭೆ, ಸುಡುಮದ್ದು ಪ್ರದರ್ಶನ, ಸಿಹಿತಿಂಡಿ ವಿತರಿಸಲಾಗಿದೆ. ಇದರಂತೆ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಬಾಯಾರು ಪದವುನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನೇತಾರರಾದ ಮುರಳೀಧರ ಯಾದವ್, ಬಾಲಕೃಷ್ಣ, ಗಣೇಶ, ಕರ್ಷಕ ಮೋರ್ಚಾ ನೇತಾರರಾದ ಪ್ರವೀಣ್‌ಚಂದ್ರ ಬಲ್ಲಾಳ್, ಸದಾಶಿವ ಚೀರಾಲ್ ಉಪಸ್ಥಿತರಿದ್ದರು. ಮೋಹನ್ ಬಲ್ಲಾಳ್, ಶಂಕರ ಮಾಸ್ತರ್, ವೇಣು, ಆನಂದ ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಆಟಿಕುಕ್ಕೆ ಸ್ವಾಗತಿಸಿ, ಸಂತೋಷ್ ವಂದಿಸಿದರು.

ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ನಿನ್ನೆ ಸಂಜೆ ಉಪ್ಪಳದಲ್ಲಿ ವಿಜಯೋತ್ಸವವನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಆಚರಿಸಿದರು.

RELATED NEWS

You cannot copy contents of this page