ಯುವಕನ ಮೇಲೆ ಹಲ್ಲೆ: ಮೂವರ ವಿರುದ್ಧ ಕೇಸು
ಕಾಸರಗೋಡು: ಯುವಕನ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಕಾಸರಗೋಡು ಪೊಲೀಸರು ಮೂವರ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೂಡ್ಲು ರಾಮದಾಸನಗರ ನಾಕುರಿ ಹೌಸ್‌ನ ಶರತ್ (32) ಎಂಬವರಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ್ದು, ಅದರಂತೆ ಅವರು ನೀಡಿದ ದೂರಿನಂತೆ ಕೂಡ್ಲು ನಿವಾಸಿಗಳಾದ ದೀಪು, ಮಹೇಶ್ ಯಾನೆ ಬಟ್ಟಂಪಾರೆ ಮಹೇಶ್ ಮತ್ತು ಕೌಶಿಕ್ ಎಂಬವರ ವಿರುದ್ಧ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.
ಜನವರಿ 5ರಂದು ಸಂಜೆ ಕೂಡ್ಲು ದೇವಸ್ಥಾನ ಬಳಿ ತನ್ನ ಸ್ನೇಹಿತರು ಪರಸ್ಪರ ಜಗಳವಾಡುತ್ತಿದ್ದರೆಂದೂ ಆಗ ಅವರನ್ನು ಶಾಂತಗೊಳಿಸಲು ನಾನು ಯತ್ನಿಸಿದಾಗ ಇಬ್ಬರು ಆರೋಪಿಗಳು ತನ್ನನ್ನು ಬೈದು, ಹಲ್ಲೆ ನಡೆಸಿದರೆಂದೂ, ಇನ್ನೋರ್ವ ಆರೋಪಿ ಬೆತ್ತದಿಂದ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಶರತ್ ಆರೋಪಿಸಿದ್ದಾರೆ.