ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಬೆಳ್ಳೂರು ಪಂಚಾ ಯತ್‌ನ ಐತ್ತನಡ್ಕ ಮಣ್ಣಾಪು ಕಾಲನಿಯ ಚೋಮ ಎಂಬವರ ಪುತ್ರ ಮಲ್ಲೇಶ್ (26) ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ಕೆಲಸಕ್ಕೆ ಹೋಗಬೇಕಾದ ಸಮಯವಾದರೂ ಕಾಣದ ಹಿನ್ನೆಲೆ ಯಲ್ಲಿ ಹುಡುಕಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ತಂದೆ, ತಾಯಿ ರಾಜೀವಿ, ಸಹೋದರರಾದ ಹರೀಶ, ಗಿರೀಶ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.