ಯುವಕ ನೇಣುಬಿಗಿದು
ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಕುಂಬಳೆ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ.
ಪೈವಳಿಕೆ ಬಳಿಯ ಬಾಯಿಕಟ್ಟೆ ಪಾಂಡ್ಯಡ್ಕ ನಿವಾಸಿ ಕೊರಗ ಎಂಬವರ ಪುತ್ರ ಶೀನ (39) ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಅಪರಾಹ್ನ ಮನೆ ಬಳಿಯ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡ ಲೇ ಸ್ಥಳೀಯರು ಅವರನ್ನು ಮಂಗಲ್ಪಾ ಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಈ ಹಿಂದೆ ಕೆಎಸ್‌ಇಬಿಯಲ್ಲಿ ದಿನಕೂಲಿ ನೌಕರನಾಗಿದ್ದ ಶೀನ ಕಳೆದ ಎರಡು ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು.
ಮೃತರು ತಾಯಿ ಸುಂದರಿ, ಸಹೋದರ-ಸಹೋದರಿಯರಾದ ಉಮೇಶ, ಇಂದಿರ, ಸರೋಜ, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.