ಮಂಜೇಶ್ವರ: ಯುವಕನೋರ್ವ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಜತ್ತೂರು ಮಜಲ್ ಎಂಬಲ್ಲಿ ಬಾಡಿಗೆ ಕ್ವಾಟ್ರರ್ಸ್ನಲ್ಲಿ ವಾಸಿಸುತ್ತಿರುವ ಹರಿಶ್ಚಂದ್ರ (31) ಮೃತಪಟ್ಟ ವ್ಯಕ್ತಿ. ಅಡಿಕೆ ಸುಲಿಯುವ ಕೆಲಸ ನಿರ್ವಸುತ್ತಿದ್ದ ಇವರು ಪುತ್ತೂರು ನಿವಾಸಿ ಸತೀಶ ಎಂಬವರ ಜೊತೆ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ 6ಗಂಟೆ ವೇಳೆ ಸತೀಶ ಕೆಲಸ ಮುಗಿಸಿ ಮನೆಗೆ ತಲುಪಿದಾಗ ಹರಿಶ್ಚಂದ್ರ ಪಕ್ಕಾಸಿಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬAದಿದ್ದಾರೆ. ಕೂಡಲೇ ಸಂಬAಧಿಕರು ತಲುಪಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಲಪಾಡಿಯಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸAಸ್ಕಾರ ನಡೆಸಲಾಯಿತು. ದಿ| ಶಂಕರ ಮೂಲ್ಯ – ದಿ| ಲಕ್ಷಿ ದಂಪತಿಯ ಪುತ್ರನಾದ ಮೃತರು ಸಹೋದರರಾದ ಧನಂಜಯ, ಸತೀಶ, ಸಂತೋಷ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







