ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವಕನೋರ್ವ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಣಂಗೂರು ತುರ್ತಿ ಫಾತಿಮಾ ಮಂಜಿಲ್ ಮುಹಮ್ಮದ್ ಕುಂಞಿ ಎಂಬವರ ಮಗ ಮಹಶೂಮ್ಲೈಸ್ (18) ಸಾವನ್ನಪ್ಪಿದ ಯುವಕ. ಈತ ನಿನ್ನೆ ಬೆಳಿಗ್ಗೆ ತನ್ನ ಮನೆ ಕೊಠಡಿಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.