ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಕಾಟುಕುಕ್ಕೆ ಬಳಿ ಯುವತಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕಾಟುಕುಕ್ಕೆ ಬಳಿಯ ದಂಬೆ ಎಂಬಲ್ಲಿನ ಸೋಮಶೇಖರ ಎಂಬವರ ಪತ್ನಿ ಕವಿತ (೨೬) ಮೃತ ಯುವತಿ. ಕೃಷಿ ಕೆಲಸಕ್ಕೆ ತೆರಳಿದ್ದ ಪತಿ ಸಂಜೆ ಮನೆಗೆ ಮರಳಿದಾಗ ಕವಿತ ನಾಪತ್ತೆಯಾಗಿ ದ್ದರು. ಇದರಿಂದ ಹುಡುಕಾಡಿದಾಗ ಮನೆ ಸಮೀಪ ಮರದಲ್ಲಿ ನೇಣು ಬಿಗಿದು  ಸಾವಿಗೀಡಾದ ಸ್ಥಿತಿಯಲ್ಲಿ ಕವಿತಾ ಪತ್ತೆಯಾಗಿದ್ದಾರೆ. ಎರಡೂವರೆ ವರ್ಷಗಳ ಹಿಂದೆಯಷ್ಟೇ ಕವಿತಾರ ವಿವಾಹ ನಡೆದಿದೆ. ಇವರಿಗೆ ಕೃಪಾರ್ಚನೆ ಎಂಬ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಕವಿತಾರ ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ಪತಿ, ಮಗುವಿನ ಹೊರತು ಸಹೋದರ ಪುರುಷೋತ್ತಮ,  ಸಹೋದರಿ ಚಿತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page