ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣ: ತೀರ್ಪು ಡಿ. 18ರಂದು : 24 ಮಂದಿ ಆರೋಪಿಗಳು
ಹೊಸದುರ್ಗ: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತ ರಾದ ಕೃಪೇಶ್ (19) ಮತ್ತು ಶರತ್‌ಲಾಲ್ (25)ರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಪೂರ್ಣಗೊಂ ಡಿದ್ದು, ತೀರ್ಪನ್ನು ನ್ಯಾಯಾಲಯ ಡಿಸೆಂಬರ್ ೨೮ಕ್ಕೆ ಮೀಸಲಿರಿಸಿದೆ.
ಈ ಕೊಲೆ ಪ್ರಕರಣದ ತನಿಖೆ ಯನ್ನು ಮೊದಲು ಬೇಕಲ ಪೊಲೀಸರು, ನಂತರ ಕ್ರೈಂ ಬ್ರಾಂಚ್ ಪೊಲೀಸರು ನಡೆಸಿದ್ದರು. ನಂತರ ನ್ಯಾಯಲಯದ ನಿರ್ದೇಶ ಪ್ರಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಸಿಬಿಐ ತಿರುವನಂತಪುರ ಘಟಕದ ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.
2019 ಫೆಬ್ರವರಿ 17ರಂದು ರಾತ್ರಿ 7.35ಕ್ಕೆ ಕೃಪೇಶ್ ಹಾಗೂ ಶರತ್‌ಲಾಲ್ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಕಲ್ಯೋಟ್ ಕೂರಂಗರ ರಸ್ತೆಯಲ್ಲಿ ಅಕ್ರಮಿಗಳ ತಂಡ ತಡೆದು ನಿಲ್ಲಿಸಿ ಯದ್ವ್ವಾತದ್ವಾ ಇರಿದು ಬರ್ಭರವಾಗಿ ಕೊಲೆಗೈದಿತ್ತು.