ತಿರುವನಂತಪುರ: ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿ ರಾಹುಲ್ ಮಾಂಕುಟ್ಟತ್ತಿಲ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಹುಲ್‌ಗೆ ೨,೨೧,೯೮೬ ಮತಗಳು ಲಭಿಸಿದೆ. ಅಬಿನ್ ವರ್ಕಿ ದ್ವಿತೀಯ (೧,೬೮,೫೮೮ ಮತ), ಅರಿತ್ ಬಾಬು ತೃತೀಯ (೩೧೯೩೦) ಸ್ಥಾನಗಳಿಸಿದ್ದಾರೆ. ಅಬಿನ್ ವರ್ಕಿ ಅರಿತ ಬಾಬು ಸಹಿತ ೧೦ ಮಂದಿ ಉಪಾಧ್ಯಕ್ಷರಾಗಲಿದ್ದಾರೆ.
ಒಟ್ಟು ೭,೨೯,೬೨೬ ಮತ ಚಲಾವಣೆಗೊಂಡರೆ ಇದರಲ್ಲಿ ೨,೧೬,೪೬೨ ಮತಗಳು ಅಸಿಂಧುಗೊಂಡಿದೆ. ಚುನಾವಣೆ ನಡೆದು ಎರಡು ತಿಂಗಳ ಬಳಿಕ ಫಲಿತಾಂಶ ಪ್ರಕಟಗೊಂಡಿದೆ. ಪತ್ತನಂತಿಟ್ಟ ಆದೂರ್ ನಿವಾಸಿಯಾದ ರಾಹುಲ್ ಮಾಂಕುಟ್ಟತ್ತಿಲ್ ಪ್ರಸ್ತುತ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ. ಸದಸ್ಯರೂ ಆಗಿದ್ದಾರೆ.