ರಶೀದ್ ಕೊಲೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಗೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ಬೈಕ್‌ನಲ್ಲಿ ಕೊಂ ಡೊಯ್ದು ಮದ್ಯಪಾನಗೈದ ಬಳಿಕ ತಲೆಗೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಪೊಲೀಸರ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಪೆರುವಾಡ್‌ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ (೩೨) ಎಂಬಾತನನ್ನು ಮೂರು ದಿನಗಳ ಕಾಲಕ್ಕೆ ಕುಂಬಳೆ  ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್‌ರ ಕಸ್ಟಡಿಗೆ ಬಿಟ್ಟು ಕೊಡಲಾಗಿದೆ. ಅಭಿಲಾಷ್ ಯಾನೆ ಹಬೀಬ್ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮)ನನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಈ ತಿಂಗಳ ೧ರಂದು ರಾತ್ರಿ ಸಮೂಸ ರಶೀದ್ ಕುಂಟಂಗೇರಡ್ಕದಲ್ಲಿ ಕುಂಬಳೆ ಐಎಚ್‌ಆರ್‌ಡಿ ಕಾಲೇಜು ಸಮೀಪದ ಮೈದಾನದಲ್ಲಿ ಕೊಲೆಗೀಡಾಗಿದ್ದನು ಮೃತದೇಹ ಮರುದಿನ ಬೆಳಿಗ್ಗೆ ಮೈದಾನಕ್ಕೆ ಹೊಂದಿಕೊಂಡಿರುವ  ಪೊದೆಗಳೆಡೆ ಯಲ್ಲಿ ಪತ್ತೆಯಾಗಿತ್ತು.  ಪೊಲೀಸರು ನಡೆ ಸಿದ ತನಿಖೆಯಲ್ಲಿ ಕೊಲೆ ನಡೆಸಿರುವುದು ಅಭಿಲಾಷ್ ಆಗಿದ್ದಾ ನೆಂದೂ  ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಅವರಿಬ್ಬರು ಕುಂಟಂಗೇರಡ್ಕಕ್ಕೆ ತಲುಪಿರು ವುದಾಗಿ ತಿಳಿದುಬಂದಿತ್ತು. ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದರೂ  ಕೊಲೆಕೃತ್ಯಕ್ಕೆ ಕಾರಣ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ವಿಷಯದಲ್ಲಿ  ಇನ್ನಷ್ಟು ತನಿಖೆಯಂಗವಾಗಿ  ಆರೋಪಿ ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.  ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಆರೋಪಿಯನ್ನು ನಿನ್ನೆ ಘಟನೆ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಗಿದೆ. 

You cannot copy contents of this page