ರಸ್ತೆಯಲ್ಲಿ ಸತ್ತುಬಿದ್ದ ನಾಗರ ಹಾವಿಗೆ ಅಂತ್ಯಸಂಸ್ಕಾರ

ಬದಿಯಡ್ಕ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಯಾವುದೋ ವಾಹನದ ಅಡಿಗೆ ಬಿದ್ದು ಸಾವ ನ್ನಪ್ಪಿದ ನಾಗರಹಾವನ್ನು ಊರವರು, ವಾಹನ ಸವಾರರು ಸೇರಿ ಸಂಸ್ಕರಿಸಿದರು.
ನೀರ್ಚಾಲು ಬದಿಯಡ್ಕ ರಸ್ತೆಯ ಕನ್ನೆಪ್ಪಾಡಿ ಸಮೀಪ ತಿರುವಿನಲ್ಲಿ ಸೋಮ ವಾರ ಸಂಜೆ ವೇಳೆ ರಸ್ತೆ ಮಧ್ಯಭಾಗದಲ್ಲಿ ಚಡಪಡಿಸುತ್ತಿದ್ದ ನಾಗರಹಾವನ್ನು ವಾಹನ ಸವಾರರು ಬದಿಗೆ ತರಲು ಯತ್ನಿ ಸುತ್ತಿದ್ದ ವೇಳೆ ಅದು ಸಾವನ್ನಪ್ಪಿದೆ. ಕೂಡಲೇ ಅವರು ನೀರ್ಚಾಲಿನ ಗಣೇಶ ಕೃಷ್ಣ ಅಳಕ್ಕೆ ಅವರನ್ನು ಸಂಪರ್ಕಿಸಿ, ಎಲ್ಲರ ಸಹಕಾರ ದೊಂದಿಗೆ ಸಂಸ್ಕರಿಸಲಾಯಿತು.

You cannot copy contents of this page