ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರ: ತೆರವುಗೊಳಿಸಿದ ಪೊಲೀಸರು
ಕಾಸರಗೋಡು: ನಗರ ಸಭೆಯ ಕಾರ್ಡ್ ಹೊಂದದೆ ನಗರದ ಹಳೆ ಬಸ್ ನಿಲ್ದಾಣದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಬೀದಿ ವ್ಯಾಪಾರ ನಡೆಸುತ್ತಿದ್ದ ಇವರನ್ನು ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪೊಲೀಸರು ತೆರವುಗೊಳಿಸಿದ್ದರು.
ನಗರಸಭೆಯ ಕಾರ್ಡ್ ಇಲ್ಲದ ಯಾರಿಗೂ ರಸ್ತೆ ಬಳಿ ವ್ಯಾಪಾರಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ಡಿವೈಎಸ್‌ಪಿ ಸ್ಪಷ್ಟಪಡಿಸಿದ್ದಾರೆ.