ರಸ್ತೆ ಬದಿ ತ್ಯಾಜ್ಯ ಎಸೆದ ಇಬ್ಬರು ವಾಹನ ಸಹಿತ ಸೆರೆ
ಕಾಸರಗೋಡು: ತ್ಯಾಜ್ಯವನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಅದನ್ನು ಗೂಡ್ಸ್ ರಿಕ್ಷಾದಲ್ಲಿ ತಂದು ರಸ್ತೆ ಬದಿಗೆಸೆದ ಇಬ್ಬರನ್ನು ವಾಹನದ ಸಹಿತ ಮೇಲ್ಪರಂಬ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮೂಲತಃ ಕೊಲ್ಲಂ ನಿವಾಸಿ ಹಾಗೂ ಈಗ ಕಾಸರಗೋಡು ಚಾಲಾ ರಸ್ತೆಯ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಯು. ಅಬ್ದುಲ್ ರಶೀದ್ (56) ಮತ್ತು ಆತನ ಸಹಾಯಕ ಅಸ್ಸಾಂ ನಿವಾಸಿ ಅಬ್ದುಲ್ ಹಬ್ (29) ಬಂಧಿತರಾ ದವರು. ತ್ಯಾಜ್ಯವನ್ನು ತಂದ ಗೂಡ್ಸ್ ಆಟೋವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಇಬ್ಬರು ತ್ಯಾಜ್ಯವನ್ನು ವಾಹನದಲ್ಲಿ ತಂದು ಅದನ್ನು ಪೆರುಂಬಳ ಕೆ.ಕೆ. ತೊಟ್ಟಿಯ ರಸ್ತೆ ಬದಿ ಎಸೆದಿದ್ದಾರೆ. ಆ ಬಗ್ಗೆ ಆ ಪರಿಸರದ ವರು ತಕ್ಷಣ ಪೊಲೀ ಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿ ತಂದು ಹಾಕ ಲಾದ ತ್ಯಾಜ್ಯವನ್ನು ಅವರಿಂದಲೇ ಅಲ್ಲಿಂದ ತೆರವುಗೊಳಿಸಿ ಬೇರೆಡೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವಂತೆ ನಿರ್ದೇಶ ನೀಡಿ ಅದರ ಪ್ರಕಾರ ಸಂಸ್ಕರಿಸಲಾಯಿತು.