ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್

ಕಾಸರಗೋಡು: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗುತ್ತಿದೆ. ಅಗತ್ಯದಷ್ಟು ವಿದ್ಯುತ್ ಲಭಿಸದೆ ಇರುವ ಹಾಗೂ ಅತೀ ಹೆಚ್ಚು ವಿದ್ಯುತ್ ಉಪಯೋಗಿಸುವ ಸಮಯ ನೋಡಿ ವಿದ್ಯುನ್ಮಂಡಳಿ ಕನಿಷ್ಠ 1 ನಿಮಿಷದಿಂದ ಅರ್ಧ ತಾಸಿನ ತನಕ ಫೀಡರ್ ಆಫ್ ಮಾಡಿ ಆ ಮೂಲಕ  ಈಗ ಅಘೋಷಿತ ಲೋಡ್ ಶೆಡ್ಡಿಂಗ್ ಜ್ಯಾರಿಗೊಳಿಸತೊಡಗಿದೆ.

 ವಿದ್ಯುತ್ ಪೂರೈಕೆ ಮೊಟಕು ಗೊಳ್ಳುವ ಸಂದ ರ್ಭಗಳಲ್ಲಿ ಇಳಿಕೆ ದಾರರು ಸಂಬಂಧ ಪಟ್ಟ ವಿದ್ಯುತ್ ಸೆಕ್ಷನ್ ಕಚೇರಿಗಳಿಗೆ ಕರೆದು ಹೇಳುತ್ತಿರುವ ವೇಳೆ, ಅವರಿಗೆ ಅಲ್ಲಿನ ಸಿಬ್ಬಂದಿಗಳು ಇಂತಹ ಅಘೋಷಿತ ಲೋಡ್ ಶೆಡ್ಡಿಂಗ್‌ನ ಬಗ್ಗೆ ಪರೋಕ್ಷ ಸೂಚನೆಗಳನ್ನು ನೀಡುತ್ತಿದ್ದಾರೆ. ಆದರೆ ವಿದ್ಯುತ್ ಲೋಡ್ ಶೆಡ್ಡಿಂಗ್‌ನ ವಿಷಯದಲ್ಲಿ ವಿದ್ಯುನ್ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಬೇಸಿಗೆಕಾಲದಲ್ಲಿ ಅತೀ ಹೆಚ್ಚು ವಿದ್ಯುತ್ ಉಪಯೋಗಿಸಲಾಗು ತ್ತಿದ್ದರೂ, ಅದಕ್ಕೆ ಹೊಂದಿಕೊಂಡು ಅಗತ್ಯದಷ್ಟು ಹೆಚ್ಚುವರಿ ವಿದ್ಯುತ್ ಪೂರೈಕೆ ಹೊರಗಿನಿಂದ ಲಭಿಸುತ್ತಿಲ್ಲ. ಇದುವೇ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್‌ಗೆ ಪ್ರಧಾನ ಕಾರಣವಾಗಿದೆ. ಅಗತ್ಯದಷ್ಟು ವಿದ್ಯುತ್ ಖರೀದಿಸುವ ಬದಲು ಹೆಚ್ಚು ವಿದ್ಯುತ್ ಉಪಯೋಗಿಸುವ ಸಂದರ್ಭಗಳಲ್ಲಿ ನಿಗದಿತ ಸಮಯದ ತನಕ ಫೀಡರ್‌ಗಳನ್ನು ಆಫ್ ಮಾಡುವ ಕ್ರಮದಲ್ಲಿ ವಿದ್ಯುನ್ಮಂಡಳಿ ಈಗ ತೊಡಗಿದೆ.

RELATED NEWS

You cannot copy contents of this page