ರಾಜ್ಯದಲ್ಲಿ  ಅತೀ ಹೆಚ್ಚು ಪಾಕ್ ಪ್ರಜೆಗಳಿರುವ ಜಿಲ್ಲೆ ಕಾಸರಗೋಡು, ಕಲ್ಲಿಕೋಟೆ, ವಯನಾಡ್

ಕಾಸರಗೋಡು: ಕೇರಳದ ಪಾಕಿ ಸ್ತಾನಿ ಪ್ರಜೆಗಳು ಅತೀ ಹೆಚ್ಚಿರುವುದು ಕಾಸರಗೋಡು, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಯಲ್ಲಾಗಿದೆಯೆಂದು ಪೊಲೀಸ್ ಲೆಕ್ಕಾಚಾರಗಳು ಸೂಚಿಸು ತ್ತಿವೆ.

ಕೇರಳದಲ್ಲಿ ಒಟ್ಟಾರೆಯಾಗಿ 104 ಪಾಕಿಸ್ತಾನಿ ಪ್ರಜೆಗಳಿದ್ದು, ಇದರಲ್ಲಿ 30 ಮಂದಿ ಈಗಾಗಲೇ ರಾಜ್ಯ ಬಿಟ್ಟಿದ್ದಾರೆ. ಈ 104 ಮಂದಿಯಲ್ಲಿ 59 ಮಂದಿ ತಕ್ಷಣ ದೇಶ ಬಿಡಬೇಕೆಂಬ ನಿರ್ದೇಶ ವನ್ನು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ನಿರ್ದೇಶ ನೀಡಿದ್ದಾರೆ. ಅದರ ಆಧಾರದಲ್ಲಿ ಕೇರಳದಲ್ಲಿ ನೆಲೆಸಿ ರುವ ಪಾಕ್ ಪೌರರಿಗೆ ಈಗಾಗಲೇ ನೋಟೀಸು ಜ್ಯಾರಿಗೊಳಿಸಲಾಗಿದೆ.

ಕೇರಳದಲ್ಲಿ ಈಗ ನೆಲೆಸಿರುವ ಪಾಕಿಸ್ತಾನಿಗಳ ಪೈಕಿ 45 ಮಂದಿ ಕೇರ ಳದಲ್ಲೇ ವಿವಾಹವಾದವರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿ ದ್ದಾರೆ. ಇನ್ನು ೫೫ ಮಂದಿ  ಸಂದರ್ಶನ ವಿಸಾದಲ್ಲಿ ಕೇರಳಕ್ಕೆ ತಲುಪಿದವ ರಾಗಿದ್ದಾರೆ. ಇದರ ಹೊರತಾಗಿ ಮೆಡಿಕಲ್ ವಿಸಾದಲ್ಲಿ ಇತರ ಮೂವರು ಕೇರಳಕ್ಕೆ ಆಗಮಿಸಿದ್ದಾರೆ.

ಹೀಗೆ ಸಂದರ್ಶನ ವಿಸಾದಲ್ಲಿ ಹಾಗೂ ಮೆಡಿಕಲ್ ವಿಸಾದಲ್ಲಿ ಕೇರಳಕ್ಕೆ ಆಗಮಿಸಿದವರು ಎಪ್ರಿಲ್ 29ರೊಳಗಾಗಿ ಭಾರತ ಬಿಡಬೇಕೆಂಬ ನಿರ್ದೇಶ ನೀಡಲಾಗಿದೆ. ಇನ್ನು ಮೆಡಿಕಲ್ ವಿಸಾದಲ್ಲಿ ಬಂದು ಇಲ್ಲಿ ಚಿಕಿತ್ಸೆಯಲ್ಲಿರುವ ಪಾಕ್ ಪೌರರು ತಮ್ಮ ಚಿಕಿತ್ಸೆ ಮುಗಿಯುವ ತನಕ ಇಲ್ಲೇ ಉಳಿದುಕೊಳ್ಳುವ  ಹಾಗಿದ್ದಲ್ಲಿ ಅದಕ್ಕೆ ಅಂತಹವರು ಕೇಂದ್ರ ಗೃಹ ಖಾತೆಯ ಅನುಮತಿ ಪಡೆಯಬೇ ಕಾಗಿದೆ. ವಿಸಾವಿಲ್ಲದೆ ಅಕ್ರಮವಾಗಿ ಕೇರಳಕ್ಕೆ ಆಗಮಿಸಿದ ಓರ್ವ ಪಾಕಿಸ್ತಾನಿ ಪೌರನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆತ ಈಗ ತೃಶೂರು ಜೈಲಿನಲ್ಲಿದ್ದಾನೆ. ಇದರ  ಹೊರತಾಗಿ ದೀರ್ಘ ಕಾಲದ ಸಂದರ್ಶನ ವಿಸಾದೊಂದಿಗೆ ಬಂದ ೬೨ ಮಂದಿ  ಪಾಕ್ ಪೌರರು ಕಣ್ಣೂರು ಜಿಲ್ಲೆಯಲ್ಲಿ ದ್ದಾರೆ. ವಿಸಾ ಸಮಯ ವ್ಯಾಪ್ತಿ ಮುಗಿದರೂ ಭಾರತ ಬಿಡದ ಪಾಕ್ ಪೌರರ ವಿರುದ ಸೂಕ್ತ ಕಾನೂನು ಕ್ರಮಕ್ಕೂ ಚಾಲನೆ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page