ರಾಜ್ಯದಲ್ಲಿ ಇಂದಿನಿಂದ ಮದ್ಯ ಬೆಲೆ ಏರಿಕೆ

ಕಾಸರಗೋಡು: ರಾಜ್ಯದಲ್ಲಿ ಇಂದಿನಿಂದ ಮದ್ಯ ಬೆಲೆ ಹೆಚ್ಚಿಸಲಾಗಿದೆ. ಇದರಂತೆ ಭಾರತೀಯ ನಿರ್ಮಿತ ವಿದೇಶ ಮದ್ಯ, ಬಿಯರ್,ವೈನ್ ಇತ್ಯಾದಿ ಎಲ್ಲಾ ಮದ್ಯಗಳಬೆಲೆ ಏರಿಸ ಲಾಗಿದೆ. ವಿವಿಧ 341 ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಏರಿಕೆ ಉಂಟಾಗಿದೆ. 10 ರೂ.ನಿಂದ 50 ರೂ. ತನಕ  ಏರಿಕೆ ತರಲಾಗಿದೆ. ಮದ್ಯ ನಿರ್ಮಾಣ ಕಂಪೆನಿಗಳು ಮುಂದಿರಿಸಿರುವ ಬೇಡಿಕೆ ಗಳನ್ನು ಪರಿಗಣಿಸಿ ಬೆಲೆ ಹೆಚ್ಚಿಸುವ ಈ ತೀರ್ಮಾನಕ್ಕೆ ರಾಜ್ಯ ಸರಕಾರ ಬಂದಿದೆ.  ಮದ್ಯ ನಿರ್ಮಾಣಕ್ಕೆ ಅತೀ ಅಗತ್ಯವಾಗಿ ರುವ ಸ್ಪಿರಿಟ್‌ನ ಬೆಲೆಯಲ್ಲ್ಲಿ ಭಾರೀ ಹೆಚ್ಚಳ ಉಂಟಾಗಿರುವುದೇ ಮದ್ಯ ಬೆಲೆ ಯೇರಿಕೆಗೆ ಪ್ರಧಾನ ಕಾರಣವಾಗಿವೆ.

೧೦೦೦ ರೂ.ನಿಂದ ೧೫೦೦ ರೂ. ನಡುವಿನ ಬೆಲೆಯ ಮದದ ಬೆಲೆಯಲ್ಲಿ ೧೩೦ರೂ. ತನಕ ಹೆಚ್ಚಳ ಉಂಟಾಗಿದೆ.

You cannot copy contents of this page