ರಾಜ್ಯದಲ್ಲಿ ಇನ್ನೆರಡು ದಿನ ವ್ಯಾಪಕ ಮಳೆ
ಕಾಸರಗೋಡು: ಅರಬೀ ಸಮುದ್ರದ ಮೇಲ್ಭಾಗದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದ್ದು, ಇದರಿಂದ ಮುಂದಿನ ಎರಡು ದಿನ ಕೇರಳದಲ್ಲಿ ವ್ಯಾಪಕ ಮಳೆಗೆ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಇದೇ ವೇಳೆ ಇಡುಕ್ಕಿ, ಎರ್ನಾಕುಳಂ, ಪಾಲಕ್ಕಾಡ್, ಮಲಪ್ಪುರಂ ಎಂಬೀ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೈಕ್ಗಳು ಢಿಕ್ಕಿ: ಕೇಸು ದಾಖಲು
ಕುಂಬಳೆ: ಬಂದ್ಯೋಡು ಅಡ್ಕದಲ್ಲಿ ಮೊನ್ನೆ ಸಂಜೆ ಎರಡು ಬೈಕ್ಗಳು ಢಿಕ್ಕಿ ಹೊಡೆದು ಓರ್ವ ಗಾಯಗೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಟ್ಟಂ ನಿವಾಸಿ ಅಬ್ದುಲ್ ಅಸೀಸ್ (೩೫) ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ನೀಡಿದ ದೂರಿನಂತೆ ಬೇರೊಂದು ಬೈಕ್ ಸವಾರನ ವಿರುದ್ಧ ಕೇಸು ದಾಖಲಿಸಲಾಗಿದೆ.