ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ರೂರ ಹಿಂಸಾಚಾರ, ಮಾದಕದ್ರವ್ಯ ವ್ಯಸನ: ವಿಪಕ್ಷ ಸಲ್ಲಿಸಿದ ತುರ್ತು ಗೊತ್ತುವಳಿ ಬಗ್ಗೆ ಚರ್ಚೆಗೆ ವಿಧಾನಸಭೆ ಅನುಮತಿ
ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕ್ರೂರ ಕೊಲೆ ಇತ್ಯಾದಿ ಹಿಂಸಾಚಾರಗಳು ಹಾಗೂ ಯಾವುದೇ ರೀತಿಯ ನಿಯಂತ್ರ ಣವೂ ಇಲ್ಲದೆ ರಾಜ್ಯ ಮಾದಕದ್ರವ್ಯ ವ್ಯಸನದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ವಿರೋಧಪಕ್ಷ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದ ತುರ್ತು ಗೊತ್ತುವಳಿಯನ್ನು ವಿಧಾನಸಭಾ ಅಧ್ಯಕ್ಷರು ಅಂಗೀಕರಿಸಿದ್ದು, ಆ ಮೂಲಕ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಗೆ ಅವರು ಅನುಮತಿ ನೀಡಿದರು.
ರಾಜ್ಯದಲ್ಲಿ ಕ್ರೂರ ಕೊಲೆ ಕೃತ್ಯಗಳು ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ. ಮಾತ್ರವಲ್ಲ ಇನ್ನೊಂದೆಡೆ ಮಾದಕದ್ರವ್ಯ ವ್ಯಸನ, ಅವುಗಳ ಮಾರಾಟ ಯಾವುದೇ ರೀತಿಯ ನಿಯಂತ್ರಣವಿಲ್ಲದೆ ಹೆಚ್ಚಾಗುತ್ತಾ ಸಾಗುತ್ತಿದೆ. ಇದೊಂದು ಅತೀ ಗಂಭೀರ ವಿಷಯವಾಗಿದೆ. ಆದ್ದರಿಂದ ಆ ಬಗ್ಗೆ ನಡೆಸಿದ ಸದನದ ಇತರ ವಿಷಯಗಳನ್ನು ಬದಿಗಿರಿಸಿ ಆ ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ವಿರೋಧ ಪಕ್ಷದವರು ವಿಧಾನಸಭೆಯಲ್ಲಿ ತುರ್ತು ಗೊತ್ತುವಳಿ ಮಂಡಿಸಿದರು.
ಇದೊಂದು ಅತೀವ ಗಂಭೀರ ವಿಷಯವಾಗಿದೆ. ಆದ್ದರಿಂದ ವಿಧಾನಸಭೆಯ ಒಳಗೆ ಮಾತ್ರವಲ್ಲ ಸಾರ್ವಜನಿಕವಾಗಿಯೂ ಚರ್ಚೆ ನಡೆಸಬೇಕಾದ ಒಂದು ವಿಷಯ ವಾಗಿದೆ ಇದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸದನದಲ್ಲಿ ಹೇಳಿದರು. ಮುಖ್ಯಮಂತ್ರಿಯವರ ಅಭಿ ಪ್ರಾಯದ ಬೆನ್ನಲ್ಲೇ ಗೊತ್ತುವಳಿಯ ಚರ್ಚೆ ವಿಧಾನಸಭಾ ಅಧ್ಯಕ್ಷರು ಅನುಮತಿ ನೀಡಿದರು. ಇದರಂತೆ ಇಂದು ಮಧ್ಯಾಹ್ನದಿಂದ ಈ ವಿಷಯದಲ್ಲಿ ಚರ್ಚೆ ನಡೆಸ ಲಾಗುವುದೆಂದು ಸಭಾಧ್ಯಕ್ಷರು ತಿಳಿಸಿದ್ದಾರೆ. ಚರ್ಚೆಗೆ ಅನುಮತಿ ನೀಡಿದ ವಿಧಾನಸಭಾ ಅಧ್ಯಕ್ಷರನ್ನು ಇದೇ ಸಂದರ್ಭದಲ್ಲಿ ವಿಪಕ್ಷೀ ಯರು ಅಭಿನಂದಿಸಿದ್ದಾರೆ.