ರಾಜ್ಯದಲ್ಲಿ 40 ಇಲೆಕ್ಟ್ರಿಕ್ ಸೂಪರ್ ಚಾರ್ಜರ್ ಕೇಂದ್ರ ಸ್ಥಾಪಿಸಲು ಯೋಜನೆ

ಕಾಸರಗೋಡು: ವಿವಿಧ ಜಿಲ್ಲೆಗಳ ಲ್ಲಾಗಿ 40 ಇಲೆಕ್ಟ್ರಿಕ್  ಚಾರ್ಜರ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಗೆ ರಾಜ್ಯ ಸರಕಾರ ರೂಪು ನೀಡಿದೆ.

ತಿರುವನಂತಪುರವನ್ನು ಪ್ರಧಾನ ಕೇಂದ್ರವನ್ನಾಗಿಸಿ ಕಾರ್ಯವೆಸಗು ತ್ತಿರುವ  ಪ್ಲಾಸ್ ಚಾರ್ಜ್ ಎನರ್ಜಿ ಸೊಲ್ಯೂ ಶನ್ ಈ ಕೇಂದ್ರಗಳನ್ನು ಸ್ಥಾಪಿಸಲಿದೆ. ಇದು 180 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿರುವ ಅತೀ ಶೀಘ್ರ ಚಾರ್ಜ್ ಮಾಡಬ ಹುದಾದ ಕೇಂದ್ರಗಳಾಗಲಿದೆ. ಕೇರಳದ  ಖ್ಯಾತ ಇಂಧನ ತಂತ್ರಜ್ಞಾನ ಸಂಸ್ಥೆಯ ಚಾರ್ಜ್ ಮೇಡ್‌ನ ಸಹಕಾರದೊಂದಿಗೆ ಇದನ್ನು ಸ್ಥಾಪಿಸಲಾಗುವುದು. ಇದು ಫ್ಲಾಶ್ ಚಾರ್ಜರ್ಸ್ ಎನರ್ಜಿ ಸೊಲ್ಯೂಶನ್‌ನ ಮೊದಲ ಯೋಜನೆಯಾಗಿದೆ.

ಕೇರಳದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾ ಗಿದೆ. ವಿದ್ಯುತ್ ಚಾಲಿತ ವಾಹನಗ ಳನ್ನು ಸರಿಯಾದ ರೀತಿಯಲ್ಲಿ ಚಾರ್ಜ್ ಮಾಡಲು ಸಾಧ್ಯವಾಗದೇ ಇರುವ ಸ್ಥಿತಿಗೆ ಪರಿಹಾರ ಕಂಡುಕೊ ಳ್ಳಲು ಈ ಹೊಸ ಯೋಜನೆಗೆ ರೂಪು ನೀಡಲಾಗಿದೆ. ಇಂತಹ ಕೇಂದ್ರಗ ಳಿಂದ ಕೇವಲ ನಿಮಿಷಗಳಲ್ಲಿ ವಾಹನ ಗಳನ್ನು ಚಾರ್ಜ್ ಮಾಡಬಹುದಾಗಿದೆ.

You cannot copy contents of this page