ರಾಜ್ಯದ ೧೭ ವಾರ್ಡ್‌ಗಳಲ್ಲಿ ನಾಳೆ ಉಪಚುನಾವಣೆ

ತಿರುವನಂತಪುರ: ರಾಜ್ಯದ ೧೭ ಸ್ಥಳೀಯಾಡಳಿತ ಪಂಚಾಯತ್ ವಾರ್ಡ್‌ಗಳಲ್ಲಿ ನಾಳೆ ಉಪಚು ನಾವಣೆ ನಡೆಯಲಿದೆ. ಒಂಭತ್ತು ಜಿಲ್ಲೆಗಳಲ್ಲಾಗಿ ಎರಡು ಬ್ಲಾಕ್ ಪಂಚಾಯತ್, ಹದಿನೈದು ಗ್ರಾಮ ಪಂಚಾಯತ್ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆಯಲಿರುವುದು. ಒಟ್ಟು ೫೪  ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಈ ಪೈಕಿ ೨೨ ಮಂದಿ ಮಹಿಳೆಯ ರಾಗಿದ್ದಾರೆ. ೨೦,೫೫೪ ಮಂದಿ ಪುರುಷರು, ೨೨,೭೨೫ ಮಹಿಳೆಯರ ಸಹಿತ ೪೩,೨೭೯ ಮಂದಿ ಮತದಾನ ನಡೆಸುವರು. ಮತ ಎಣಿಕೆ ೧೧ರಂದು ಬೆಳಿಗ್ಗೆ ೧೦ರಿಂದ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.

RELATED NEWS

You cannot copy contents of this page