ರಾತ್ರಿ ವೇಳೆ ಮನೆಗೆ ಗುಂಡು ತಗಲಿದ ಘಟನೆ: ಫಾರೆನ್ಸಿಕ್ ತಜ್ಞರಿಂದ ಮಾಹಿತಿ ಸಂಗ್ರಹ

ಕಾಸರಗೋಡು: ಚೀಮೇನಿ ತೆರೆದ ಬಂಧೀಖಾನೆ ಬಳಿಯ ಎ.ಟಿ.ವಿ. ಪದ್ಮನಾಭನ್ ಎಂಬವರ ಮನೆಯ ಕಿಟಿಕಿ ಬಾಗಿಲಿಗೆ ಕಳೆದ ಶನಿವಾರ ರಾತ್ರಿ ಗುಂಡೇಟು ತಗಲಿದ ಬಗ್ಗೆ ಫಾರೆನ್ಸಿಕ್ ವಿಭಾಗ ಸಮಗ್ರ ಪರಿಶೀಲನೆ ನಡೆಸಿ ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ. ಕಿಟಿಕಿ ಬಾಗಿಲಿನ ಗಾಜಿಗೆ ತಗಲಿ ಅಲ್ಲೇ ಕೆಳಗೆ ಬಿದ್ದಿದ್ದ ಗುಂಡನ್ನೂ ಪೊಲೀಸರು ಘಟನೆ ನಡೆದ ಮರು ದಿನವೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಫೋರೋನ್ಸಿಕ್ ತಜ್ಞರು ಗುಂಡು ತಗಲಿದ ಮನೆಯಲ್ಲಿ ಮಾತ್ರವಲ್ಲ ಮನೆ ಪರಿಸರ ಪ್ರದೇಶದಲ್ಲೂ ಪರಿಶೀಲನೆ ನಡೆಸಿದ್ದಾರೆ. ನಾಡಕೋವಿ ಬಳಸಿ ಗುಂಡು ಹಾರಿಸಿರಬಹು ದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ರಾಜ್ಯ ತೋಟಗಾರಿಕಾ ನಿಗಮದ ಚೀಮೇನಿ ಎಸ್ಟೇಟ್‌ನ ಸಮೀಪದಲ್ಲಿ ಪದ್ಮನಾನ್‌ರ ಮನೆ ಇದೆ. ಇದು ಕಾಡು ಹಂದಿ, ಮೊಲ, ಮುಳ್ಳು ಹಂದಿ, ಜಿಂಕೆ, ಇತ್ಯಾದಿ ವನ್ಯಜೀವಿಗಳು  ಧಾರಾಳವಾಗಿ ಇರುವ ಪ್ರದೇಶವೂ ಆಗಿದೆ. ವನ್ಯಜೀವಿಗಳನ್ನು ಬೇಟೆಯಾಡುತ್ತಿರುವ ಹಲವು ತಂಡಗಳು ಇಲ್ಲಿಗೆ ಪದೇ ಪದೇ ಆಗಮಿಸುತ್ತಿವೆ. ಈ ತಂಡ ವನ್ಯಜೀವಿಗೆ ಗುಂಡು ಹಾರಿಸಿದಾಗ ಅದು ಗುರಿತಪ್ಪಿ ಮನೆಯ ಕಿಟಿಕಿ ಬಾಗಿಲಿಗೆ ತಗಲಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೇ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಗುತ್ತಿದ್ದ ತಂಡವೊಂದನ್ನು ಇತ್ತೀಚೆಗೆ ಅರಣ್ಯ ಪಾಲಕರು ನಾಡ ಬಂದೂಕು ಗಳೊಂದಿಗೆ ಬಂಧಿಸಿತ್ತು. ಅವರನ್ನು ಕೇಂದ್ರೀಕರಿಸಿ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯೂ ಅಗತ್ಯ ಸಹಾಯಗಳನ್ನು ಒದಗಿಸುತ್ತಿದೆ.

RELATED NEWS

You cannot copy contents of this page