ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1536 ಕ್ರಿಮಿನಲ್ ಕೇಸುಗಳು ಇತ್ಯರ್ಥ
ಕಾಸರಗೋಡು: ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾ ರದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಛಯ ದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 1536 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡಿದೆ. ಇದು ವಿವಿಧ ನ್ಯಾಯಾಲಯಗಳ ವಿಚಾರಣೆಯಲ್ಲಿದ್ದ ಪ್ರಕರಣಗಳಾಗಿವೆ. ಈ ಪ್ರಕರಣಗಳನ್ನು 45,50,600 ದಂಡ ವಸೂಲಿ ಮೂಲಕ ಇತ್ಯರ್ಥ ಗೊಳಿಸಲಾಯಿತು. ಇದರ ಹೊರ ತಾಗಿ 113 ವಾಹನ ಅಪಘಾತ ಪ್ರಕರ ಣಗಳನ್ನು ಒಟ್ಟು 3,44,66, 735 ರೂ.ಗಳಿಗೆ ಇತ್ಯರ್ಥಗೊಳಿಸಲಾ ಯಿತು. ಮಾತ್ರವಲ್ಲದೆ 48 ಬ್ಯಾಂಕ್ ರಿಕವರಿ ಕೇಸುಗಳನ್ನು 49,51,605 ರೂ., ಬಿಎಸ್ಎನ್ಎಲ್ಗೆ ಸಂಬAಧಿಸಿದ ಹಲವು ಕೇಸುಗಳನ್ನು 33,116 ರೂ., ನ್ಯಾಯಾಲ ಯದಲ್ಲಿ ವಿಚಾರಣೆಯಲ್ಲಿರುವ ಎರಡು ಬ್ಯಾಂಕ್ ರಿಕವರಿ ಕೇಸುಗಳನ್ನು 5,70,000 ರೂ., 28 ಪ್ರಿಲಿಟಿ ಗೇಷನ್ (ಅದಾಲತ್ಗೆ ನೇರವಾಗಿ ಸಲ್ಲಿಸಲಾದ ದೂರುಗಳು)ಗಳನ್ನು 12,30,000 ರೂ.ಗೆ ಇತ್ಯರ್ಥಗೊ ಳಿಸಲಾಯಿತು. ಎರಡು ಲೇಬರ್ ಕೋರ್ಟ್ಗಳಲ್ಲಿದ್ದ ಕೇಸುಗಳನ್ನು 80,000 ರೂ., ಮೂರು ರಿಜಿಸ್ಟ್ರೇಶನ್ ಅಂಡರ್ ವಾಲ್ಯೂ ವೇಷನ್ ಕೇಸುಗಳನ್ನು 99,450 ರೂ.ಗಳಿಗೆ ಬಗೆಹರಿಸಲಾಯಿತು.
ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರಾದ ಸಾನು ಎಸ್ ಪಣಿಕ್ಕರ್ ಅಧ್ಯಕ್ಷರಾಗಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಈ ಅದಾಲತ್ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಕಾರ್ಯದರ್ಶಿ ರುಕ್ಮ ಎಸ್. ರಾಜ್ ಮತ್ತು ಎ. ಮನೋಜ್ ಅದಾಲತ್ಗೆ ನೇತೃತ್ವ ನೀಡಿದರು.