ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ ಗಳು ನಿತ್ಯ ಘಟನೆಯಾಗಿ ಪರಿಣಮಿ ಸಿದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ತುರ್ತು ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ನಿರ್ದೇಶಿಸಿದೆ. ಶಾಸಕ ಇ. ಚಂದ್ರಶೇಖರನ್ ಈ ವಿಷಯವನ್ನು ಸಭೆಯ ಮುಂದಿಟ್ಟಿ ದ್ದಾರೆ. ಅವೈಜ್ಞಾ ನಿಕ ರೀತಿಯ ಹಂಪ್‌ಗಳನ್ನು ಹೊರ ತುಪಡಿಸಲು ಹಾಗೂ ವಾಹನಗಳಲ್ಲಿ ಕಾನೂನು ವಿರುದ್ಧವಾಗಿ ಸ್ಥಾಪಿಸಿದ ಲೈಟ್‌ಗಳನ್ನು ಪರಿಶೀಲಿಸುವಂತೆ ಮೋಟಾರು ವಾಹನ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ಅಪರಿಮಿತ ವೇಗದಲ್ಲಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಪ್ರತ್ಯೇಕ ಪರಿಶೀಲನೆ ನಡೆಯಲಿರುವುದು.
