ರಾ. ಹೆದ್ದಾರಿಯಲ್ಲಿ ವಿದ್ಯಾರ್ಥಿಗಳ ಮಾರಾಮಾರಿ: ನಾಲ್ವರ ವಿರುದ್ಧ ಕೇಸು; ಇನ್ನೂ 6 ವಿದ್ಯಾರ್ಥಿಗಳ ಅಮಾನತು
ಕಾಸರಗೋಡು: ವಿದ್ಯಾನಗರಕ್ಕೆ ಸಮೀಪದ ನಾಯಮ್ಮಾರ್ಮೂಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊನ್ನೆ ಸಂಜೆ ನಾಯಮ್ಮಾರ್ಮೂಲೆ ಹೈಯರ್ ಸೆಕೆಂಡರಿ ಶಾಲೆಯ ಎರಡು ಗುಂಪು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿ ಕೊಂಡ ಘಟನೆಗೆ ಸಂಬಂಧಿಸಿ, ಅದರಲ್ಲಿ ಗಾಯಗೊಂಡ ಓರ್ವ ವಿದ್ಯಾರ್ಥಿ ನೀ ಡಿದ ದೂರಿನಂತೆ ನಾಲ್ವರು ವಿದ್ಯಾರ್ಥಿ ಗಳ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘರ್ಷಣೆಗೆ ಸಂಬಂಧಿಸಿ ಪ್ರಸ್ತುತ ಶಾಲೆಯ ಇನ್ನೂ ಆರು ವಿದ್ಯಾರ್ಥಿ ಗಳನ್ನು ಶಾಲೆಯಿಂದ ಅಮಾನತುಗೊಳಿ ಸಲಾಗಿದೆ. ನಿನ್ನೆ ಸೇರಿದ ಪ್ರಸ್ತುತ ಶಾಲೆಯ ಪಿಟಿಎ ಹಾಗೂ ಶಾಲಾ ಸಂರಕ್ಷಣಾ ಸಮಿತಿ ಸಭೆಯಲ್ಲಿ ಈ ಆರು ವಿದ್ಯಾರ್ಥಿ ಗಳನ್ನು ಅಮಾನತುಗೊಳಿಸುವ ತೀ ರ್ಮಾನ ಕೈಗೊಳ್ಳಲಾಗಿದೆ. ಈ ಘರ್ಷಣೆಗೆ ಸಂಬಂಧಿಸಿ ಮೊನ್ನೆ ಏಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸ ಲಾಗಿತ್ತು.
ಆ ಮೂಲಕ ಅಮಾನತುಗೊಳಿಸಲ್ಪಟ್ಟ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಈಗ 11ಕ್ಕೇರಿದೆ. ಹೀಗೆ ಅಮಾನತುಗೊಳಿ ಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ನಾಲ್ಕು ಪ್ಲಸ್ ವನ್ ಹಾಗೂ ೯ ಪ್ಲಸ್ ಟು ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.