ರಿಕ್ಷಾ ಢಿಕ್ಕಿಹೊಡೆಸಿ ಬಾಲಕನ ಮೇಲೆ ದಾಳಿ: ನರಹತ್ಯಾ ಪ್ರಕರಣ ದಾಖಲು
ಕಾಸರಗೋಡು: ಬಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಆತನಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆಸಿ ಗಾಯ ಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕಾಸರಗೋ ಡು ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಅಣಂಗೂರು ಬೆದಿರಾದ ಬಾಡಿಗೆ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುತ್ತಿರುವ ಮುಹಮ್ಮದ್ ಶಮೀರ್ 17) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಇದರಂತೆ ನಿಯಾಸ್ ಪುಳಿಕ್ಕೂರು ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಾರ್ಚ್ 17ರಂದು ಮೊಗ್ರಾಲ್ ಪುತ್ತೂರು ಚೌಕಿ ಕಂಬಾರ್ ರಸ್ತೆಯಲ್ಲಿ ಆರೋಪಿಯ ಜತೆ ಕೆಲಸಕ್ಕೆ ಹೋಗದ ದ್ವೇಷದಿಂದ ಆತ ತನ್ನ ಮೇಲೆ ಹಲ್ಲೆ ನಡೆಸಿದ್ದು ಬಳಿಕ ಆರೋಪಿ ಆತನ ಆಟೋ ರಿಕ್ಷಾದಿಂದ ತನಗೆ ಢಿಕ್ಕಿ ಹೊಡೆಸಿ ಗಾಯಗೊಳಿಸಿ ದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮುಹಮ್ಮದ್ ಶಮೀರ್ ಆರೋಪಿಸಿದ್ದಾನೆ.