ರೇಶನ್ ಅಂಗಡಿಗಳಲ್ಲಿ ಸಾಮಗ್ರಿ ಕೊರತೆ: ಕಾಂಗ್ರೆಸ್‌ನಿಂದ ನಾಳೆ ಸಪ್ಲೈ ಕಚೇರಿ ಧರಣಿ
ಉಪ್ಪಳ: ರೇಶನ್ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಪ್ರತಿಭಟಿಸಿ ಮಂಜೇಶ್ವರ ಹಾಗೂ ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಬಂದ್ಯೋಡಿನಲ್ಲಿರುವ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಾಳೆ ಬೆಳಿಗ್ಗೆ 10ಕ್ಕೆ ನಡೆಯಲಿದೆ. ಮಂಜೇಶ್ವರ ಬ್ಲೋಕ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಡಿಎಂಕೆ, ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಂದರ ಆರಿಕ್ಕಾಡಿ, ಈ ಬಗ್ಗೆ ತಿಳಿಸಿದ್ದಾರೆ.