ರೇಶನ್ ಅಂಗಡಿಗೆ ಹೋದ ಯುವತಿ ನಾಪತ್ತೆ
ಹೊಸದುರ್ಗ: ರೇಶನ್ ಅಂಗಡಿಗೆ ತೆರಳಿದ ಯುವತಿ ನಾಪತ್ತೆಯಾದ ಬಗ್ಗೆ ವೆಳ್ಳರಿಕುಂಡು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಇಲ್ಲಿನ ಬಲಾಲ್ ಗ್ರಾಮದ ಅರೇಕ್ಕಾರ ನಿವಾಸಿ ಪ್ರದೀಪ್ ಆರ್.ಕೆ. ಎಂಬವರ ಪತ್ನಿ ಪ್ರಜಿತ ಸಿ.ಎಂ. (24) ನಾಪತ್ತೆಯಾದ ಯುವತಿ. ಈ ತಿಂಗಳ 25ರಂದು ಬೆಳಿಗ್ಗೆ 10 ಗಂಟೆಗೆ ಸಮೀಪದ ಮಂಗೆತ್ ಎಂಬಲ್ಲಿನ ರೇಶನ್ ಅಂಗಡಿಗೆಂದು ಹೋದ ಈಕೆ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪತಿ ನೀಡಿದ ದೂರಿನಂತೆ ವೆಳ್ಳರಿಕುಂಡು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.