ರೇಶನ್ ವ್ಯಾಪಾರಿಗಳ ಮುಷ್ಕರ: ಸಾಮಗ್ರಿ ವಿತರಣೆ ಮೊಟಕು

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯದ ರೇಶನ್ ವ್ಯಾಪಾರಿಗಳು ಮುಷ್ಕರ ನಡೆಸುತ್ತಿದ್ದು ಇದರಿಂದ ಇಂದು ಹಾಗೂ ನಾಳೆ ರೇಶನ್ ಅಂಗಡಿಗಳು ಮುಚ್ಚುಗಡೆಗೊಳ್ಳಲಿದೆ. ಆದ್ದರಿಂದ ರೇಶನ್ ಸಾಮಗ್ರಿಗಳ ವಿತರಣೆ ಮೊಟಕುಗೊಂಡಿದೆ.

ವೇತನ ಪ್ಯಾಕೇಜ್ ಪರಿಷ್ಕರಿ ಸಬೇಕು, ಕಿಟ್ ಕಮಿಶನ್ ವಿತರಿಸ ಬೇಕು, ಕ್ಷೇಮಾಭಿವೃದ್ಧಿ ಸಕ್ರಿಯಗೊಳಿ ಸಬೇಕು, ಸಾರ್ವಜನಿಕ ವಿತರಣೆ ವಲ ಯದೊಂದಿಗೆ ಕೇಂದ್ರದ ಅವಗಣನೆ ಕೊನೆಗೊಳಿಸಬೇಕು ಎಂಬೀ ಬೇಡಿಕೆ ಗಳನ್ನು ಮುಂದಿರಿಸಿ ರೇಶನ್ ವ್ಯಾಪಾ ರಿಗಳು ಮುಷ್ಕರ ನಡೆಸುತ್ತಿದ್ದಾರೆ.

ಕಳೆದ ತಿಂಗಳ  ವಿತರಣೆ ಈ ತಿಂಗಳ 5ರ ವರೆಗೆ ಮುಂದುವ ರಿದಿತ್ತು.  6 ಹಾಗೂ 7ರಂದು ರಜೆಯಾಗಿತ್ತು. ಇಂದು ಹಾಗೂ ನಾಳೆ  ವ್ಯಾಪಾರಿಗಳ ಮುಷ್ಕರವಾದುದರಿಂದ ಜುಲೈ ತಿಂಗಳ ಸಾಮಗ್ರಿ  ವಿತರಣೆ ಸಂದಿಗ್ಧತೆಯಲ್ಲಿದೆ. ಇದರಿಂದ ರೇಶನ್ ಸಾಮಗ್ರಿಗಳನ್ನೇ ಆಶ್ರಯಿಸಿ ಜೀವಿಸುವ ಬಡವರು ಸಂಕಷ್ಟಕ್ಕೀಡಾಗಲಿದ್ದಾರೆಂಬ ಆರೋಪ ಕೇಳಿಬಂದಿದೆ.

You cannot copy contents of this page