ರೈಲಿನಲ್ಲಿ ಸಾಗಿಸುತ್ತಿದ್ದ 1100 ಪ್ಯಾಕೆಟ್ ತಂಬಾಕು ಉತ್ಪನ್ನ ವಶ

ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ 1100 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ನಿನ್ನೆ ಸಂಜೆ ೪ ಗಂಟೆ ವೇಳೆ ಮಂಗಳೂರು ಭಾಗದಿಂದ ಬಂದು ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದ ವರಾವಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಂಬಾಕು ಉತ್ಪನ್ನ ಪತ್ತೆಯಾಗಿದೆ. ಜನರಲ್ ಬೋಗಿಯ ಟಾಯ್‌ಲೆಟ್ ಸಮೀಪ ಬ್ಯಾಗ್‌ನಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ತಂಬಾಕು ಉತ್ಪನ್ನ ಕಂಡು ಬಂದಿತ್ತು. ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ರಜಿಕುಮಾರ್ ನೇತೃತ್ವದಲ್ಲಿ ಡಾನ್ಸಾಫ್ ತಂಡದ ಸದಸ್ಯರಾದ ಮಹೇಶ್, ಜ್ಯೋತಿಷ್, ಶರತ್ ಎಂಬಿವರು ನಡೆಸಿದ ಶೋಧ ವೇಳೆ ಮಾಲು ಪತ್ತೆಯಾಗಿದೆ. ಈ ಸಂಬಂಧ ಯಾರನ್ನೂ ಸೆರೆ ಹಿಡಿಯಲಾಗಿಲ್ಲ.

You cannot copy contents of this page