ರೈಲುಗಾಡಿಗೆ ಸ್ವಾಗತ ನೀಡಲು ಸಂಸದರ ಸಹಿತ ತಂಡ ನಿಲ್ದಾಣಕ್ಕೆ: ನಿಲ್ಲಿಸದೆ ಸಂಚರಿಸಿದ ರೈಲು
ಆಲಪ್ಪುಳ: ಹೊಸತಾಗಿ ನಿಲುಗಡೆ ಮಂಜೂರುಗೊಂಡ ರೈಲುಗಾಡಿಗೆ ಸ್ವಾಗತ ನೀಡಲೆಂದು ಸಂಸದರ ಸಹಿತ ಹಲವರು ನಿಲ್ದಾಣಕ್ಕೆ ತಲುಪಿದರೂ ರೈಲು ನಿಲ್ಲದೆ ಸಂಚರಿಸಿದ ಘಟನೆ ನಡೆದಿದೆ.
ಚೆಂಗನ್ನೂರು ಚೆರಿಯನಾಡ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಕೊಲ್ಲಂ-ಎರ್ನಾಕುಳಂ ಮೆಮು ರೈಲುಗಾಡಿಗೆ ಚೆರಿಯನಾ ಡ್‌ನಲ್ಲಿ ಇಂದಿನಿಂದ ನಿಲುಗಡೆ ಮಂಜೂರು ಮಾಡಲಾಗಿತ್ತು. ದೀರ್ಘಕಾಲದ ಬೇಡಿಕೆಯ ಫಲವಾಗಿ ರೈಲಿಗೆ ನಿಲುಗಡೆ ಮಂಜೂರು ಮಾಡಲಾಗಿತ್ತು. ಇದರಂತೆ ಇಂದು ಬೆಳಿಗ್ಗೆ 7.15ಕ್ಕೆ ಸಂಸದ ಕೊಡಿ ಕುನ್ನಿಲ್ ಸಹಿತ ರಾಜಕೀಯ ನೇತಾ ರರು, ಪ್ರಯಾಣಿಕರು ರೈಲಿಗೆ ಸ್ವಾಗತ ನೀಡಲು ನಿಲ್ದಾಣಕ್ಕೆ ತಲುಪಿದ್ದರು. ಆದರೆ ಬಂದ ರೈಲು ನಿಲ್ಲಿಸದೆ ತೆರಳಿದ್ದು, ಇದು ಅಲ್ಲಿ ಸೇರಿದವರಿಗೆ ನಿರಾಸೆಯ ಜೊತೆಗೆ ಮುಜುಗರವೂ ಸೃಷ್ಟಿಸಿದೆ. ಇದೇ ವೇಳೆ ಈಬಗ್ಗೆ ರೈಲ್ವೇ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಲೋಕೋ ಪೈಲೆಟ್‌ನ ಲೋಪವೇ ರೈಲು ಗಾಡಿ ನಿಲ್ಲಿಸದಿರಲು ಕಾರಣವೆಂದು ತಿಳಿಸಲಾಗಿದೆ.