ರೈಲು ಢಿಕ್ಕಿ ಹೊಡೆದು ಎಂ.ಎಸ್.ಎಫ್. ನೇತಾರ ಮೃತ್ಯು
ಕಾಸರಗೋಡು: ರೈಲು ಢಿಕ್ಕಿ ಹೊಡೆದು ಎಂಎಸ್ಎಫ್ ನೇತಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೆರ್ಕಳ ತಾಯಲ್ ಹೌಸಿನ ನಿವಾಸಿ ಹಾಗೂ ಸುನ್ನಿ ಬಾಲವೇದಿ ಜಿಲ್ಲಾ ಉಪಾಧ್ಯಕ್ಷರೂ, ಎಂಎಸ್ಎಫ್ ಮಂಡಲ ಉಪಾಧ್ಯಕ್ಷರೂ ಆಗಿರುವ ಅಬ್ದುಲ್ ಬಾದ್ಶಾ (೨೦) ಸಾವನ್ನಪ್ಪಿದ ದುರ್ದೈವಿ. ಇವರು ಮುಹಮ್ಮದ್- ಹಸೀನಾ ದಂಪತಿ ಪುತ್ರನಾಗಿದ್ದಾರೆ. ಮಲಬಾರ್ ಕಾಂಪ್ಲೆಕ್ಸ್ನ ಬಿಬಿಎ ವಿದ್ಯಾರ್ಥಿಯಾಗಿರುವ ಇವರು ನಮ್ಮ ಸ್ನೇಹಿತರೊಂದಿಗೆ ರೈಲಿನಲ್ಲಿ ಚಾಲಕುಡಿಗೆ ಹೋಗಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಮೊಬೈಲ್ ಫೋನ್ ಕೈಯಿಂದ ಜಾರಿ ಹೊರಕ್ಕೆ ಬಿದ್ದಿದೆ. ಇದರಿಂದ ರೈಲಿನಿಂದ ಇಳಿದ ಬಳಿಕ ಅವರು ನಿನ್ನೆ ಬೆಳಿಗ್ಗೆ ತನ್ನ ಸ್ನೇಹಿತರ ಜತೆಗೆ ಚಾಲಕುಡಿ- ಕಲೋಟ್ಟುಂಗರ ನಡುವಿನ ಆಳೂರು ಮೇಲ್ಸೇತುವೆ ಬಳಿ ನಷ್ಟಗೊಂಡ ಮೊಬೈಲ್ ಫೋನ್ ರೈಲು ಹಳಿ ಬಳಿ ಹುಡುಕಾಡತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಚೆನ್ನೈ-ಎಗ್ಮೋರ್ -ಗುರುವಾಯೂರು ರೈಲು ಗಾಡಿ ಢಿಕ್ಕಿ ಹೊಡೆದಿದೆ.
ಗಂಭೀರ ಗಾಯ ಗೊಂಡ ಅವರನ್ನು ಆ ವೇಳೆ ಅವರ ಜತೆಗಿದ್ದ ಸ್ನೇಹಿತರಾದ ಅಬೀದ್ ಉಬೈಸ್, ನೈಮುದ್ದೀನ್ ಮತ್ತು ಹಬೀಬ್ ಮತ್ತಿತರರು ಸೇರಿ ಚಾಲ ಕುಡಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಿ ದರೂ ಪ್ರಾಣ ಉಳಿಸಲು ಸಾಧ್ಯವಾ ಗಲಿಲ್ಲ. ಮೃತರು ಹೆತ್ತವರ ಹೊರತಾಗಿ ಸಹೋದರ ಸಹೋದರಿಯರಾದ ಅಜಿ ನಾಸ್, ಮಿಲ್ಶಾನಾ, ಅನಫಾತಿಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.