ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು
ಕಾಸರಗೋಡು: ರೈಲು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪಿಲಿಕ್ಕೋಡ್ ಕೋತೋಳಿಯ ಎಂ. ಶ್ಯಾಮ್ ಕುಮಾರ್ (೨೮) ಸಾವನ್ನಪ್ಪಿದ ಯುವಕ. ಪಿಲಿಕ್ಕೋಡು ರೈಲ್ವೇ ಮೇಲ್ಸೇತುವೆ ಬಳಿಯ ರೈಲು ಹಳಿಯಲ್ಲಿ ಇವರು ಮೊನ್ನೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಂದೇರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.
ದಿ| ಚಂದ್ರನ್- ಎಂ. ಶಾಂತ ದಂಪತಿ ಪುತ್ರನಾಗಿರುವ ಶ್ಯಾಮ್ ಪ್ರಸಾದ್, ಸಹೋದರ ಎಂ. ಶರತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.