ರೈಲು ಸಂಚರಿಸುತ್ತಿದ್ದಂತೆ ಹಳಿಯಲ್ಲಿ ಮಲಗಿ ಅಪಾಯದಿಂದ ಪಾರಾದ ವ್ಯಕ್ತಿ
ಕಣ್ಣೂರು: ರೈಲುಗಾಡಿ ಸಂಚರಿಸು ತ್ತಿದ್ದಂತೆ ಹಳಿಯಲ್ಲಿ ಮಲಗಿ ಅಪಾ ಯದಿಂದ ಅದೃಷ್ಟವಶಾತ್ ಪಾರಾದ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ. ಕಣ್ಣೂರು ಬಳಿಯ ಪನ್ನೇರ್ಪಾರ ನಿವಾಸಿ ಪವಿತ್ರನ್ (60) ಎಂಬವರು ಅಪಾಯದಿಂದ ಕೂದಲೆಳೆ ಅಂತರ ದಲ್ಲಿ ಪಾರಾದ ವ್ಯಕ್ತಿಯಾಗಿದ್ದಾರೆ.
ಕಳೆದ ಆದಿತ್ಯವಾರ ಸಂಜೆ ಕಣ್ಣೂರು ಪನ್ನೇರ್ ಪಾರ ಎಂಬಲ್ಲಿ ಈ ಘಟನೆ ನಡೆದಿತ್ತು. ಪವಿತ್ರನ್ ಹಳಿಯಲ್ಲಿ ಮೊಬೈಲ್ ಫೋನ್ ಕಿವಿಗಿರಿಸಿ ನಡೆದು ಹೋಗುತ್ತಿದ್ದಾಗ ರೈಲು ಗಾಡಿ ಆಗಮಿಸಿತ್ತು. ಆದರೆ ರೈಲು ಸಮೀಪಕ್ಕೆ ತಲುಪಿದರೂ ಪವಿತ್ರನ್ರ ಅರಿವಿಗೆ ಬಂದಿರಲಿಲ್ಲ. ಅದನ್ನು ಕಂಡ ಜನರು ಬೊಬ್ಬಿಟ್ಟು ಹೇಳಿದರೂ ಪವಿತ್ರನ್ರ ಕಿವಿಗೆ ಬೀಳಲಿಲ್ಲ. ರೈಲು ಕಣ್ಮುಂದೆ ತಲುಪಿದಾಗಲೇ ಅವರ ಅರಿವಿಗೆ ಬಂದಿದ್ದು, ಆದರೆ ಹಳಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ತಿಳಿದು ಇನ್ನು ಹಳಿಯಲ್ಲಿ ಮಲಗುವುದೇ ಏಕದಾರಿ ಎಂದು ನಿರ್ಧರಿಸಿದ್ದಾರೆ. ಅದರಂತೆ ಹಳಿಯಲ್ಲಿ ಮಲಗಿದ್ದು ರೈಲು ಸಂಚರಿಸಿದ ಬಳಿಕ ಎದ್ದು ಹೋಗಿದ್ದಾರೆ.
ಇದೇ ವೇಳೆ ಘಟನೆಯ ದೃಶ್ಯವನ್ನು ಕಂಡವರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಅದು ವೈರಲ್ ಆದಾಗಲೇ ರೈಲು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪವಿತ್ರನ್ರ ಮನೆಗೆ ರೈಲು ಹಳಿ ದಾಟಿ ಹೋಗಬೇಕು. ಎಂದಿನಂತೆ ಆದಿತ್ಯವಾರವೂ ಹಳಿ ಮೇಲೆ ನಡೆದುಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಇದೇ ವೇಳೆ ಘಟನೆಯ ಕುರಿತು ಕೇಸು ದಾಖಲಿಸಿ ಕೊಂಡ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಪವಿತ್ರನ್ರನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.