ರೈಲು ಹಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ರೈಲು ಹಳಿಯಲ್ಲಿ ವಲಸೆ ಕಾರ್ಮಿಕರಾದ ಯುವಕರಿಬ್ಬರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ಮೃತದೇಹಗಳ ಬಳಿ ಎಟಿಎಂ ಕಾರ್ಡ್ ಪೊಲೀಸರಿಗೆ ಲಭಿಸಿದೆ. ಮೃತರನ್ನು ಪಶ್ಚಿಮ ಬಂಗಾಲದ ನಾಸಿರ್ ಗ್ರಾಮ ನಿವಾಸಿಗಳಾದ ದೀನ್ ಮೊಹಮ್ಮದ್ ಮಾಲೀಕ್ ಎಂಬವರ ಪುತ್ರ ಸಂತು ಮಾಲೀಕ್ (೩೨) ಮತ್ತು ಮೊಯ್ದೀನ್ ಶೇಕ್ ಎಂಬವರ ಪುತ್ರ ಫಾರೂಕ್ ಶೇಖ್ (೨೩) ಎಂದು ಗುರುತಿಸಲಾಗಿದೆ. ಇವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿದು ಹೊಸದುರ್ಗದ ಕೊಳವಯಲ್ನ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಹೊಸದುರ್ಗ ಇಕ್ಭಾಲ್ ರೈಲ್ವೇ ಗೇಟ್ ಸಮೀಪದ ಮಾಪ್ಪಿಳ್ಳ ಸ್ಕೂಲ್ ಬಳಿಯ ರೈಲು ಹಳಿಯಲ್ಲಿ ಈ ಇಬ್ಬರ ಮೃತದೇಹ ಪತ್ತೆಯಾಗಿದೆ. ರೈಲು ಢಿಕ್ಕಿ ಹೊಡೆದು ಇವರು ಸಾವನ್ನಪ್ಪಿರಬಹುದೆಂದು ಹೇಳಲಾಗುತ್ತಿದೆ. ಈ ಇಬ್ಬರು ಕೆಲಸದ ಬಳಿಕ ನಿನ್ನ ರಾತ್ರಿ ರೈಲು ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಗಾಡಿ ಢಿಕ್ಕಿ ಹೊಡೆದ ಸಾವನ್ನಪ್ಪಿರಬಹುದೆಂದು ಪೊಲೀಸರ ಪ್ರಾಥಮಿಕ ನಿಗಮನವಾಗಿದೆ. ಮತದೇಹಗಳು ಪತ್ತೆಯಾದ ಜಾಗದಲ್ಲಿ ಮೊಬೈಲ್ ಫೋನ್ ಪುಡಿಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೊಸದುರ್ಗ ಇನ್ಸ್ಪೆಕ್ಟರ್ ಎಂ.ಎ.ಅಜಾದ್ ನೇತೃತ್ವದ ಪೊಲೀಸರು ಸಂಭಾವ್ಯ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಮೃತದೇಹಗಳನ್ನು ಬಳಿಕ ಜಿಲ್ಲ ಸಹಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.