ರೈಲು ಹಳಿಯಲ್ಲಿ ತಾಯಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ
ಕೋಟ್ಟಯಂ: ರೈಲು ಹಳಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ.
ಏಟುಮಾನೂರು ರೈಲ್ವೇ ಹಳಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿವೆ. ಏಟ್ಟುಮಾನೂರು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಮೂವರು ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದಿರುವುದಾಗಿ ರೈಲಿನ ಲೋಕೋ ಪೈಲಟ್ ತಿಳಿಸಿದ್ದಾರೆ. ರೈಲು ಹಾದು ಹೋಗುತ್ತಿದ್ದ ವೇಳೆ ಈ ಮೂವರು ದಿಢೀರ್ ಆಗಿ ರೈಲು ಹಳಿಗೇರಿದರೆಂದೂ, ಆಗ ನಾನು ಜೋರಾಗಿ ಹಾರ್ನ್ ಮಾಡಿದರೂ ಅವರು ಅದನ್ನು ಲೆಕ್ಕಿಸದೆ ರೈಲಿನಡಿ ಹಾರಿರುವುದಾಗಿ ಹೇಳಿದ್ದಾರೆ. ಏಟುಮಾನೂರು ಪದೋಲಿಕ್ಕಾಲ್ ರೈಲ್ವೇ ಗೇಟ್ ಬಳಿ ಈ ಘಟನೆ ನಡೆದಿದೆ. ಮೃತದೇಹಗಳು ಗುರುತು ಹಚ್ಚಲಾರದಷ್ಟು ಛಿದ್ರಗೊಂಡಿವೆಯೆಂದು ಪೊಲೀಸರು ತಿಳಿಸಿದ್ದಾರೆ.