ರೈಲು ಹಳಿಯಲ್ಲಿ ಮಲಗಿದ ವ್ಯಕ್ತಿಗೆ 1000ರೂ. ದಂಡ
ಕಣ್ಣೂರು: ರೈಲು ಸಂಚರಿಸುತ್ತಿ ರುವಾಗ ಹಳಿಯಲ್ಲಿ ಮಲಗಿ ಅದ್ಭುತಕರವಾಗಿ ಪಾರಾದ ವ್ಯಕ್ತಿಗೆ ೧೦೦೦ರೂ. ದಂಡ ವಿಧಿಸಲಾಗಿದೆ. ಕಣ್ಣೂರು ಪುಳಿಕುನ್ನು ನಿವಾಸಿ ಪವಿತ್ರನ್‌ಗೆ ಕಣ್ಣೂರು ರೈಲ್ವೇ ನ್ಯಾಯಾಲಯ 1000 ರೂ. ದಂಡ ಪಾವತಿಸಲು ಶಿಕ್ಷೆ ವಿಧಿಸಿದೆ. ಡಿಸೆಂಬರ್ 23ರಂದು ಮಂಗಳೂ ರಿನಿಂದ ತಿರುವನಂತಪುರಕ್ಕೆ ತೆರಳುವ ರೈಲು ಸಂಚರಿಸುವ ವೇಳೆ ಇವರು ಹಳಿಯಲ್ಲಿ ಸಿಲುಕಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮಲಗಿ ಅಪಾಯದಿಂದ ಪಾರಾಗಿದ್ದರು.