ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಶಿಬಿರ

ಕಾಸರಗೋಡು: ರೋಟರಿ ಕ್ಲಬ್‌ನ ಆಶ್ರಯದಲ್ಲಿ ನರೇಂದ್ರಮೋದಿ ಯುಗ್ ಪುರುಷ್ ಸ್ಕೂಲ್‌ನ ವಿದ್ಯಾರ್ಥಿಗಳಿಗಾಗಿ ಪೂರ್ಣ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.  ರೋಟರಿ ಕ್ಲಬ್‌ನ ಕಾಸರಗೋಡು ಘಟಕದ ಡಾ| ನಾರಾಯಣ ನಾಯ್ಕ್ ದೀಪ ಬೆಳಗಿಸಿ ಶಿಬಿರವನ ಉಧ್ಘಾಟಿಸಿದರು. ಡಾ| ಹರಿಕೃಷ್ಣನ್ ನಂಬ್ಯಾರ್, ಡಾ| ಶ್ರೀಧರ ರಾವ್, ಮಕ್ಕಳ ದಂತ ರೋಗ ತಪಾಸಣೆ ಹಾಗೂ ಶಿಶುರೋಗ ತಜ್ಞ ಡಾ| ನಾರಾಯಣ ನಾಯ್ಕ್  ಮಕ್ಕಳ ದೈಹಿಕ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಡಾ  ರೇಖಾ ರೈ,  ಎಂ.ಟಿ. ದಿನೇಶ್, ಆರ್. ಪ್ರಶಾಂತ್ ಕುಮಾರ್, ಬಿಂದು, ವಿಶ್ವಜಿತ್, ಡಾ| ಸುರೇಶ್ ಬಾಬು,  ಆರ್ಯ, ಮಧುಶ್ರೀ ಕಾಮತ್ ಮೊದಲಾದವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಸುಮಾರು ೬೦ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page