ರ್ಯಾಗಿಂಗ್: ಪ್ಲಸ್ಟು ವಿದ್ಯಾರ್ಥಿಗಳ ವಿರುದ್ಧ ಕೇಸು
ಕಾಸರಗೋಡು: ಚೆಮ್ನಾಡು ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿ ಯೋರ್ವನನ್ನು ರ್ಯಾಗಿಂಗ್ ಗೊಳಪ ಡಿಸಿದ ದೂರಿನಂತೆ ಪ್ರಸ್ತುತ ಶಾಲೆಯ ಐದು ಮಂದಿ ಪ್ಲಸ್ಟು ವಿದ್ಯಾರ್ಥಿ ಗಳ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ತಿಂಗಳ 19ರಂದು ಮಧ್ಯಾಹ್ನ ಪ್ಲಸ್ವನ್ ವಿದ್ಯಾರ್ಥಿಯ ಮೇಲೆ ರ್ಯಾಗಿಂಗ್ ನಡೆಸಿರುವುದಾಗಿ ಆತ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದಾನೆ. ಆ ದೂರನ್ನು ನಂತರ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.