ಲಯನ್ಸ್ ಕ್ಲಬ್ ಮಂಜೇಶ್ವರ-ಉಪ್ಪಳ ಸುವರ್ಣ ಮಹೋತ್ಸವ ನಾಳೆ

ಉಪ್ಪಳ: ಲಯನ್ಸ್‌ಕ್ಲಬ್ ಮಂಜೇಶ್ವರ-ಉಪ್ಪಳ ಇದರ ಸುವರ್ಣ ಮಹೋತ್ಸವ ಈ ತಿಂಗಳ ನಾಳೆ ಸಂಜೆ 5.30ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಭವನದಲ್ಲಿ ನಡೆಯಲಿದೆ. ಇದರಂ ಗವಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ 600ನೇ ಉಚಿತ ಕಣ್ಣು ತಪಾಸಣೆ ಶಿಬಿರ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿ ತ್ಸಾಲಯದ ಆಶ್ರಯದಲ್ಲಿ ನಯಾಬ ಝಾರ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಸಿ.ಎ.ಟಿ.ಕೆ. ರಜೀಶ್ ಪಿ.ಎಂ. ಜೆ.ಎಫ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಲಯನ್ ಪಿ. ಕಿಶೋರ್ ರಾವ್ ಉಪಸ್ಥಿತರಿರುವರು. ಲಯನ್ ಲಕ್ಷ್ಮಣ್ ಕುಂಬಳೆ, ಲಯ ನ್ ಅಶೋಕ್, ಲಯನ್ ಕಮಲಾಕ್ಷ ಪಂಜ, ಲಯನ್ ಗಣೇಶ್ ಎಂ. ಉಪಸ್ಥಿತರಿರುವರು. ಕಣ್ಣಿನ ಶಿಬಿರವ ನ್ನು ಟಿ.ಕೆ. ರಜೀಶ್  ಉದ್ಘಾಟಿಸು ವರು. ಲ| ಲಕ್ಷ್ಮಣ್ ಕುಂಬಳೆ ಅಧ್ಯಕ್ಷತೆ ವಹಿಸುವರು.

ಲ| ಡಾ. ಎನ್ ಶ್ರೀಧರ ಭಟ್, ಡಾ. ಆನಂದ ಎಸ್. ಹುಂಡಿ, ಲ| ಅಶೋಕ್, ಲ| ಕಮಲಾಕ್ಷ ಪಂಜ,  ಜಯಶರ್ಮಿಳ ಕೆ. ಪಂಜ ಭಾಗವಹಿ ಸುವರು. ಸಂಜೆ ನಡೆಯುವ ಸುವರ್ಣ ಮಹೋತ್ಸವದಲ್ಲಿ ಲ| ಲಕ್ಷ್ಮಣ್ ಎಸ್. ಕುಂಬಳೆ ಅಧ್ಯಕ್ಷತೆ ವಹಿಸು ವರು. 50 ವರ್ಷಗಳ ಇತಿಹಾಸವನ್ನು ಲ| ಡಾ. ಶ್ರೀಧರ್ ಭಟ್ ವಿವರಿಸು ವರು. ಲ| ಡಾ. ಕೆ.ಪಿ. ಹೊಳ್ಳ, ಲ| ಪಿ. ಕಿಶೋರ್ ರಾವ್,  ನಾರಾಯಣ ಹೆಗ್ಡೆ, ಶಂಕರನಾರಾಯಣ ಹೊಳ್ಳ ಸಹಿತ ಹಲವು ಗಣ್ಯರು ಭಾಗವಹಿ ಸುವರು. ಇದೇ ವೇಳೆ ಹಲವರನ್ನು ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ೬.೩೦ರಿಂದ ಕುದ್ರೋಳಿ ಗಣೇಶ್ ರಿಂದ ವಿಸ್ಮಯ ಜಾದೂ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page