ಲೀಗಲ್ ಮೆಟ್ರೋಲಜಿ ಅಧಿಕಾರಿಗಳಿಂದ ಮಾರುಕಟ್ಟೆಗಳಲ್ಲಿ ತಪಾಸಣೆ

ಕಾಸರಗೋಡು: ಓಣಂ ಮಾರುಕಟ್ಟೆಯಲ್ಲಿ ಗ್ರಾಹಕರ ಸಂರಕ್ಷಣೆ ಖಚಿತಪಡಿಸು ವುದಕ್ಕಾಗಿ ಲೀಗಲ್ ಮೆಟ್ರೋಲಜಿ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ತಪಾಸಣೆಗಳನ್ನು ಆರಂಭಿಸಿದೆ. ಈ ತಿಂಗಳ 7ರಂದು ಆರಂಭಗೊಂಡ ತಪಾಸಣೆ 14ರವರೆಗೆ ಮುಂದುವರಿಯಲಿದೆ. ನಿನ್ನೆ ಜಿಲ್ಲೆಯ ಎಲ್ಲಾ ಬಟ್ಟೆ ಅಂಗಡಿಗಳನ್ನು ಕೇಂದ್ರೀಕರಿಸಿ ತಪಾಸಣೆ ನಡೆಸಲಾಗಿದೆ. ಇದರಲ್ಲಿ ಮೂರು ಅಂಗಡಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಬಟ್ಟೆ ಅಂಗಡಿಗಳಲ್ಲಿ ಅಳತೆ ಮಾಡುವ ಸ್ಕೇಲ್‌ಗಳನ್ನು ತಪಾಸಣೆಗಾಗಿ ಹಾಜರುಪಡಿಸದಿರುವುದು, ಪ್ಯಾಕೇಜ್ ಉತ್ಪನ್ನಗಳಾದ ಶರ್ಟ್, ಮುಂಡು ಮೊದಲಾದವುಗಳಲ್ಲಿ ನಿಯಮಾನುಸಾರವಾದ ಮಾಹಿತಿಗಳು ಇಲ್ಲದಿರುವುದಕ್ಕೆ ಕೇಸು ದಾಖಲಿಸಲಾಗಿದೆ.

You cannot copy contents of this page