ಲೈಂಗಿಕ ಕಿರುಕುಳ ಪ್ರಕರಣ: ನಟ ಮುಖೇಶ್ ರಾಜಕೀಯ ಭವಿಷ್ಯ ತೀರ್ಮಾನ ಇಂದು; ಸಿಪಿಎಂ ನಿರ್ಣಾಯಕ ಸಭೆ ಆರಂಭ, ರಾಜ್ಯ ಸಮಿತಿ ನಿಲುವನ್ನು ಪ್ರಶ್ನಿಸಿದ ವೃಂದಾ ಕಾರಾಟ್
ತಿರುವನಂತಪುರ: ನಟಿಯೋರ್ವೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಸಿಪಿಎಂ ಶಾಸಕ ಹಾಗೂ ನಟನಾಗಿರುವ ಮುಖೇಶ್ರ ಮುಂದಿನ ರಾಜಕೀಯ ಭವಿಷ್ಯ ಇಂದು ನಿರ್ಣಯಿಸಲ್ಪಡಲಿದೆ.
ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಇದರ ನೈತಿಕ ಹೊಣೆಹೊತ್ತು ಮುಖೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಡರಂಗದ ಘಟಕ ಪಕ್ಷವಾದ ಸಿಪಿಐ ಈಗಾಗಲೇ ಆಗ್ರಹಪಟ್ಟಿದೆ. ಆದರೆ ದಿನಗಳ ಹಿಂದೆ ಸೇರಿದ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆಯಲ್ಲಿ ಮುಖೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲವೆಂಬ ನಿಲುವು ವ್ಯಕ್ತಪಡಿಸಲಾಗಿತ್ತು. ಆ ನಿಲುವನ್ನು ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯೆ ವೃಂದಾ ಕಾರಾಟ್ ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಮುಖೇಶ್ ರಾಜೀನಾಮೆ ನೀಡುವಂತೆ ಸಿಪಿಐ ಕೂ ಡಾ ಆಗ್ರಹ ಪಟ್ಟು ರಂಗಕ್ಕಿಳಿದಿದೆ. ಇದು ಸಿಪಿ ಎಂನ ರಾಜ್ಯ ಸಮಿತಿಯನ್ನು ತೀವ್ರ ಒತ್ತಡದಲ್ಲಿ ಸಿಲುಕುವಂತೆ ಮಾಡಿದೆ. ಈ ವಿಷಯದ ಬಗ್ಗೆ ಮತ್ತೆ ಮುಕ್ತ ತೀರ್ಮಾನ ಕೈಗೊಳ್ಳಲು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆಯನ್ನು ಇಂದು ಕರೆಯಲಾಗಿದೆ. ಇದರಲ್ಲಿ ಮುಖೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾಗೂ ಅವರ ಮುಂದಿನ ರಾಜಕೀಯ ಭವಿಷ್ಯ ನಿರ್ಣಯಿಸಲ್ಪಡಲಿದೆ.