ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಕಠಿಣ ಪೊಲೀಸ್ ಕ್ರಮ ಗಡಿಪ್ರದೇಶಗಳಲ್ಲಿ ಬಿಗು ತಪಾಸಣೆ

ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಜಿಲ್ಲೆ ಯಲ್ಲಿ ಪೊಲೀಸರು ಬಿಗಿ ಕ್ರಮ ಆರಂಭಿಸಿದ್ದಾರೆ. ಇದರ ಜತೆಗೆ ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲಿ  ಬಿಗಿ ಪೊಲೀಸ್ ತಪಾಸಣೆ ಕಾರ್ಯಾ ಚರಣೆಯಲ್ಲೂ ತೊಡಗಿದ್ದಾರೆ.

 ಚುನಾವಣಾ ನೀತಿ ಸಂಹಿತೆ ಜ್ಯಾರಿ ಯಲ್ಲಿರುವ ಅವಧಿಯಲ್ಲಿ ಬೆಲೆಬಾಳುವ ವಸ್ತುಗಳು, ಚಿನ್ನ, ನಗದು ಇತ್ಯಾದಿಗಳನ್ನು ಜತೆಗೆ ಸಾಗಿಸುವವರು ಅದಕ್ಕೆ ಸರಿಯಾದ ದಾಖಲು ಪತ್ರಗಳನ್ನು ಕೈವಶವಿರಿಸಬೇ ಕಾಗಿದೆ. ಇಲ್ಲವಾದಲ್ಲಿ ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಇದರಂತೆ ೫೦,೦೦೦ ರೂ.ಗಿಂತಲೂ ಹೆಚ್ಚು ಹಣ ಕೈವಶವಿರಿಸಿ ಪ್ರಯಾಣಿಸುವವರು ಅದಕ್ಕೆ ಸಂಬಂಧಪಟ್ಟ ಸರಿಯಾದ ದಾಖಲು ಪತ್ರಗಳನ್ನು ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಮುಂದೆ ಹಾಜರುಪಡಿಸ ಬೇಕು. ಇಲ್ಲವಾದಲ್ಲಿ ಅನಧಿಕೃತ ಹಣ ವಾಗಿ ಪರಿಗಣಿಸಿ ಅದನ್ನು  ಮುಟ್ಟು ಗೋಲು ಹಾಕಲಾಗುವುದು. ಕೇರಳ ಮಾತ್ರವಲ್ಲ ಕರ್ನಾಟಕ ಪೊಲೀಸರೂ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಇನ್ನೊಂ ದೆಡೆ ಬಿಗಿ ತಪಾಸಣೆ ಆರಂಭಿಸಿದ್ದಾರೆ. ಇದರಂತೆ ಗಡಿ ಮೂಲಕ ಅತ್ತಿತ್ತ ಸಾಗುವ ಎಲ್ಲಾ ವಾಹನಗಳನ್ನು  ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಮುಂದಕ್ಕೆ ಸಾಗಬಿಡಲಾಗುತ್ತದೆ. ಕಾಸರಗೋಡು ಸೇರಿದಂತೆ ಕೇರಳದಿಂದ ದೈನಂದಿನ ಅದೆಷ್ಟೋ ಮಂದಿ ಶಿಕ್ಷಣ, ಉದ್ಯೋಗ, ಚಿಕಿತ್ಸೆ, ವ್ಯಾಪಾರ ಇತ್ಯಾದಿಗಳಿಗಾಗಿ ವಾಹನಗಳು ಮತ್ತು ರೈಲುಗಳಲ್ಲಿ ಕರ್ನಾಟಕದ ವಿವಿಧೆಡೆಗಳಿಗೆ ಹೋಗುತ್ತಿದ್ದಾರೆ. ಅವರನ್ನು   ಗಡಿಯಲ್ಲಿ  ಉಭಯ ರಾಜ್ಯಗಳ ಪೊಲೀಸರ ಬಿಗಿ ತಪಾಸಣೆಗೊಳಪಡಿಸುತ್ತಿದ್ದಾರೆ.

ಬ್ಯಾಂಕ್ ಅಥವಾ ಎಟಿಎಂನಿಂದ ಹಣ ಹಿಂಪಡೆದು ಅತ್ತಿತ್ತ ಸಾಗಿಸುವ ಹಾಗಿದ್ದಲ್ಲಿ ಅದಕ್ಕೆ ರಶೀದಿ, ಪಾಸ್ ಪುಸ್ತಕವನ್ನು ಹಾಜರುಪಡಿಸಬೇಕು. ವ್ಯಾಪಾರ-ವ್ಯವಹಾರಗಳಿಗೆ ಸಂಬಂಧಿಸಿದ ಹಣ ಸಾಗಿಸುವುದಾಗಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ವ್ಯಾಪಾರ  ದಾಖಲೆ ಗಳನ್ನು ಕೈವಶವಿರಿಸಿಕೊಳ್ಳಬೇಕು.

ಜಿಲ್ಲೆಯ ತಲಪ್ಪಾಡಿ, ಆನೆಕಲ್ಲು, ಈಶ್ವರಮಂಗಲ, ಸಾಲೆತ್ತೂರು, ಜಾಲ್ಸೂರು, ಪೆರ್ಲ ಸೇರಿದಂತೆ ಎಲ್ಲಾ ಗಡಿಪ್ರದೇಶಗಳಲ್ಲಿ  ಪೊಲೀಸರು ಮಾತ್ರವಲ್ಲ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ತಂಡ ಎಲ್ಲಾ ವಾಹನಗಳನ್ನು ಬಿಗಿ ತಪಾಸಣೆಗೊಳಪಡಿಸುತ್ತಿದೆ.

ಚುನಾವಣಾ ವೇಳೆ ಕಾನೂನು, ಸುವ್ಯವಸ್ಥೆಗಳನ್ನು  ಪಾಲಿಸುವ ಸಲುವಾಗಿ ಹಲವು ಪ್ರಕರಣಗಳ ಆರೋಪಿಗಳಾಗಿ ರುವ ೨೪ ಮಂದಿ ವಿರುದ್ಧ  ಕಾಪಾ ಕಾನೂನು ಪ್ರಕಾರ ಬಂಧಿಸಿ  ಅವರನ್ನು ಜೈಲಿಗಟ್ಟುವಂತೆ  ಪೊಲೀಸರು ವರದಿ ಸಲ್ಲಿಸಿದ್ದಾರೆ. ೧೨ ಮಂದಿ ವಿರುದ್ಧ ಪೊಲೀ ಸರು ಈಗಾಗಲೇ ಅಗತ್ಯದ ಕ್ರಮ ಕೈಗೊಂ ಡಿದ್ದಾರೆ. ವಾರಂಟ್ ಪ್ರಕರಣಗಳ ಆರೋ ಪಿಗಳು ಶೀಘ್ರ ಸಂಬಧಪಟ್ಟ ನ್ಯಾಯಾ ಲಯಗಳಲ್ಲಿ ಹಾಜರಾಗಬೇಕು. ಇಲ್ಲ ವಾದಲ್ಲಿ ಅವರನ್ನು  ಬಂಧಿಸಲಾಗು ವುದೆಂಬ ಮುನ್ನೆಚ್ಚರಿಕೆಯನ್ನು ಪೊಲೀ ಸರು  ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page