ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ; ರಾಜ್ಯಸಭೆಯಲ್ಲಿ ಭವಿಷ್ಯ ಇಂದು ನಿರ್ಧಾರ
ದೆಹಲಿ: ಸತತ 12 ಗಂಟೆಗಳ ಚರ್ಚೆ ನಂತರ ಲೋಕಸಭೆ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀ ಡಿದೆ. ಈ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಅದರ ಭವಿಷ್ಯ ಇಂದೇ ನಿರ್ಧಾರವಾಗಲಿದೆ.
12 ತಾಸುಗಳ ಚರ್ಚೆ ಬಳಿಕ ಇಂದು ಮುಂಜಾನೆ ಸುಮಾರು1.56ರ ವೇಳೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆಯೆAಬ ಮಹತ್ವದ ಘೋಷಣೆಯನ್ನು ಲೋಕ ಸಭಾ ಸ್ಪೀಕರ್ ಓಂಬಿರ್ಲಾ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು ಹಾಗೂ ಅದರ ವಿರುದ್ಧ 232 ಮತಗಳು ಚಲಾಯಿಸಲ್ಪಟ್ಟಿದೆ ಯೆಂದು ಅವರು ತಿಳಿಸಿದ್ದಾರೆ.
ಮತದಾನದ ಮೂಲಕ ಈ ತಿದ್ದುಪಡಿ ಮಸೂದೆಗೆ ಅಂಗೀಕಾರ ಲಭಿಸಿರುವುದು ಭಾರತೀಯ ರಾಜ ಕೀಯದಲ್ಲಿ ಒಂದು ಮಹತ್ವದ ತಿರುವು ಪಡೆದುಕೊಂಡಿದೆ. ಈ ಮಸೂದೆಗೆ ಬಿಜೆಪಿಯ ಎಲ್ಲಾ ಮಿತ್ರ ಪಕ್ಷಗಳೂ ದೃಢವಾದ ಬೆಂಬಲ ನೀಡಿವೆ. ಆದರೆ ವಿರೋಧಪಕ್ಷಗಳು ಈ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಆದರೆ ಮಸೂದೆಯ ಅಂಗೀಕಾರವು ಚುನಾವಣಾ ರಾಜಕೀಯದ ಈಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಪ್ರಶ್ನೆ ಈಗ ಎಲ್ಲರ ಮನಸ್ಸಿನಲ್ಲಿ ಮೂಡತೊಡಗಿದೆ. ಆ ಮೂಲಕ ಮೋದಿ ಸರಕಾರವು ತನ್ನ ನಿರ್ಧಾರ ಗಳಲ್ಲಿ ಎಂದೂ ದೃಢವಾಗಿ ನೆಲೆಯೂ ರಿದೆ ಹಾಗೂ ಯಾವುದೇ ರೀತಿಯ ಒತ್ತಡಗಳಿಗೂ ಮಣಿಯುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಹೊಂದಿದ್ದರೂ ತನ್ನ ಮಿತ್ರ ಪಕ್ಷಗಳ ಪೂರ್ಣ ಬೆಂಬಲದೊAದಿಗೆ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸುವAತೆ ಮಾಡಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವದ ಶಕ್ತಿ ಮತ್ತು ದೃಢತೆಯನ್ನು ಪ್ರತಿಬಿಂಬಿ ಸುತ್ತಿದೆ.2019ರಲ್ಲಿ ಅಧಿಕಾರಕ್ಕೆ ಬಂದ ಕೇವಲ 6 ತಿಂಗಳಲ್ಲಿ ಮೋದಿ ಸರಕಾರ ತ್ರಿವಳಿ ತಲಾಕ್, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 370ನೇ ವಿಧಿ ರದ್ಧತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಜ್ಯಾರಿಗೊಳಿಸಿತ್ತು. ಆಗ ಬಿಜೆಪಿಗೆ 303 ಸದಸ್ಯರ ಬಲವಿತ್ತು. ಆದರೆ 2024ರಲ್ಲಿ ಬಿಜೆಪಿಯ ಸಂಖ್ಯಾಬಲ 240ಕ್ಕೆ ಇಳಿ ದರೂ ವಕ್ಫ್ ತಿದ್ದುಪಡಿ ಮಸೂದೆಯಂ ತಹ ದೊಡ್ಡ ನಿರ್ಧಾರವನ್ನು ತೆಗೆದು ಕೊಳ್ಳುವಲ್ಲಿ ಪ್ರಧಾನಿ ಮೋದಿ ಹಿಂಜರಿ ಯಲಿಲ್ಲ. ಇದು ಮೋದಿಯವರ ನಿರ್ಧಾರ ತೆಗೆದುಕೊಳ್ಳುವ ಶೈಲಿಯು ಇನ್ನೂ ಅಚಲವಾಗಿದೆಯೆಂಬುದನ್ನು ತೋರಿಸುತ್ತಿದೆ. ವಲ್ಫ್ ತಿದ್ದುಪಡಿ ಮಸೂದೆಯನ್ನು ಮೋದಿ ಸರಕಾರದ ಬ್ರಹ್ಮಾಸ್ತ್ರವೆಂದೇ ಕರೆಯಲಾಗುತ್ತಿದೆ. ಒಂದೇ ಏಟಿಗೆ ಹಲವು ಗುರಿಗಳನ್ನು ಎನ್ಡಿಎ ಸರಕಾರ ಆ ಮೂಲಕ ಸಾಧಿಸಿದೆ. ಇದು ಮುಂದೆ ಬಿಹಾರ ಮತ್ತು ಪಶ್ಚಿಮ ಬಂಗಾಳದAತಹ ರಾಜ್ಯಗಳಿಗೆ ನಡೆಯಲಿರುವ ಚುನಾ ವಣೆಯಲ್ಲಿ ತಮ್ಮ ಪರ ಸಕಾರಾತ್ಮಕ ಪರಿಣಾಮ ಬೀರಲಿದೆಯೆಂಬ ನಿರೀಕ್ಷೆಯ ನ್ನು ಬಿಜೆಪಿ ವ್ಯಕ್ತಪಡಿಸಿದೆ.