ಲೋಕೋಪಯೋಗಿ ಕಚೇರಿಗೆ ಮುಂದುವರಿದ ಕಲ್ಲು ತೂರಾಟ
ಕಾಸರಗೋಡು: ನಗರದ ಪಿಲಿಕುಂಜೆ ಯಲ್ಲಿರುವ ಲೋಕೋಪ ಯೋಗಿ ಇಲಾಖೆಯ ಕಚೇರಿಗೆ ದುಷ್ಕರ್ಮಿಗಳು ಕಲ್ಲೆಸೆತ ನಡೆಸುವ ಸಮಾಜದ್ರೋಹ ಕೃತ್ಯಗಳು ಇನ್ನೂ ಮುಂದುವರಿಸಿದ್ದಾರೆ.
ಮೊನ್ನೆ ರಾತ್ರಿ ಕಚೇರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಕಚೇರಿಯ ಗಾಜುಗಳು ಪುಡಿಗೈಯ್ಯಲ್ಪಟ್ಟಿವೆ. ಈ ಬಗ್ಗೆ ಲಭಿಸಿದ ದೂರಿನಂತೆ ಕಾಸರ ಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕಚೇರಿಗೆ ದುಷ್ಕರ್ಮಿ ಗಳು ಕಲ್ಲು ತೂರಾಟ ನಡೆಸುತ್ತಿರುವುದು ಇದು ಆರನೇ ಬಾರಿಯಾಗಿದೆ. ಕಳೆದ ಮಾರ್ಚ್ ೧೩,೧೪, ೨೦, ೨೪ ಮತ್ತು ೨೭ರಂದು ಈ ಕಚೇರಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಅದಾದ ಬಳಿಕ ಮೊನ್ನೆ ರಾತ್ರಿಯೂ ಮತ್ತೆ ಕಲ್ಲು ತೂರಾಯ ನಡೆದಿದೆ. ಈ ಹಿಂದೆ ಕಲ್ಲು ತೂರಾಟ ನಡೆಸಿದಾಗ ಕಲ್ಲು ಕಚೇರಿಯೊಳಗಿನ ಕಂಪ್ಯೂಟರ್, ಮೋನಿಟರ್ ಮತ್ತು ಪ್ರಿಂಟರ್‌ಗೂ ತಗಲಿ ಹಾನಿಯಾಗಿತ್ತು.
ಈ ಪರಿಸರದಲ್ಲಿ ಸಿಸಿ ಟಿವಿ ಕ್ಯಾಮರಾಗಳಿದ್ದರೆ ಕಲ್ಲು ತೂರಾಟ ನಡೆಸುತ್ತಿರುವ ದುಷ್ಕರ್ಮಿಗಳ ಗುರುತು ಹಚ್ಚಲು ಸಾಧ್ಯವಾಗುತ್ತಿತ್ತೆಂದು ಕಚೇರಿಯ ಸಿಬ್ಬಂದಿಗಳು ಹೇಳುತ್ತಿದ್ದಾರೆ.