ವಕ್ಫ್ ತಿದ್ದುಪಡಿ ಮಸೂದೆ ನಾಳೆ ಲೋಕಸಭೆಯಲ್ಲಿ ಮಂಡನೆ
ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ ಲೋಕಸಭೆ ಯಲ್ಲಿ ಮಂಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ.
ದಿ ಕೆಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಈ ಮಸೂದೆಗೆ ಬೆಂಬಲ ಸೂಚಿಸಿದೆ. ಅದು ಕಾಂಗ್ರೆಸ್‌ನ್ನು ಗೊಂದಲಕ್ಕೆ ಸಿಲುಕುವಂತೆಯೂ ಮಾಡಿದೆ. ಕೇರಳದ ವಕ್ಫ್ ಮಂಡಳಿಯು ಮುನಂಬಂ ಪ್ರದೇಶದ ೬೦೦ಕ್ಕೂ ಹೆಚ್ಚು ಕುಟುಂ ಬಗಳ ಪಿತ್ರಾರ್ಜಿತ ಆಸ್ತಿಗಳನ್ನು ವಕ್ಫ್ ಭೂಮಿ ಎಂದು ಘೋಷಿಸಿದೆ. ಅದಕ್ಕೆ ಅದು ಅಸ್ತಿತ್ವದಲ್ಲಿರುವ ಕಾನೂನನ್ನು ಬಳಸಿಕೊಂಡಿದೆ. ಕಳೆದ ಮೂರು ವರ್ಷ ಗಳಿಂದ ಈ ಸಮಸ್ಯೆ ಬೆಳೆಯುತ್ತಲೇ ಇದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಕಾನೂನು ತಿದ್ದುಪಡಿಯಿಂದ ಮಾತ್ರವೇ ಸಾಧ್ಯವೆಂದೂ, ಆದ್ದರಿಂದ ಜನಪ್ರತಿನಿಧಿ ಗಳು ಸಂಘಟಿತರಾಗಿ ಈ ಕಾನೂನು ತಿದ್ದುಪಡಿಗೆ ಸಹಕರಿಸಬೇಕೆಂದು ಸಿಬಿಸಿಐ ಒತ್ತಾಯಿಸಿದೆ.
ಎಪ್ರಿಲ್ ೪ರಂದು ಸಂಸತ್‌ನ ಬಜೆಟ್ ಅಧಿವೇಶನ ಕೊನೆಗೊಳ್ಳಲಿದೆ. ಅದಕ್ಕೆ ಮೊದಲೇ ಈ ಮಸೂದೆ ಯನ್ನು ಸಂಸತ್‌ನಲ್ಲಿ ಮಂಡಿಸಿ ಚರ್ಚಿಸಿ ಅಂಗೀಕರಿಸುವ ಉದ್ದೇಶ ಕೇಂದ್ರ ಸರ ಕಾರ ಹೊಂದಿದೆ. ವಕ್ಫ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರಲು ವಕ್ಫ್ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳು ಮತ್ತು ಮಹಿಳೆಯರಿಗೂ ಅಕಾಶ ಕಲ್ಪಿಸಿ ಕೊಡುವುದೂ ಸೇರಿದಂತೆ ಹಲವು ಮಹತ್ವದ ಉದ್ದೇಶಗಳು ಹೊಂದಿವೆ ಯೆಂದು ಕೇಂದ್ರಸರಕಾರ ಹೇಳಿದೆ.
ಇದೇ ಸಂದರ್ಭದಲ್ಲಿ ಮಸೂದೆ ಅಸಂವಿಧಾನಿಕ ಮತ್ತು ಮುಸ್ಲಿಮರ ವಿರುದ್ಧ ಪಕ್ಷಪಾತದಿಂದ ಕೂಡಿದೆಯೆಂದು ವಿರೋಧಪಕ್ಷದ ನಾಯಕರು ಆರೋಪಿಸಿ ಇನ್ನೊಂದೆಡೆ ಇದರ ವಿರುದ್ಧ ರಂಗಕ್ಕಿಳಿದಿದ್ದಾರೆ.
ಈ ಮಸೂದೆಯನ್ನು ಕಳೆದ ಅಗೋಸ್ತ್ ೪ರಂದು ಕೇಂದ್ರಸಚಿವ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದರು. ಬಳಿಕ ಅದನ್ನು ಸಂಸದೀಯ ಜಂಟಿ ಸಮಿತಿಯ ಪರಿಗಣನೆಗೆ ಕಳುಹಿಸಿಕೊಡ ಲಾಗಿತ್ತು. ಜಂಟಿ ಸಮಿತಿ ಇತ್ತೀಚೆಗೆ ಈ ಮಸೂದೆಗೆ ಅನುಮೋದನೆ ನೀಡಿತ್ತು. ಅದನ್ನು ಸಂಸತ್‌ನ ಅಂಗೀಕಾರಕ್ಕಾಗಿ ನಾಳೆ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರಕಾರ ಈಗ ತೀರ್ಮಾನಿಸಿದೆ.