ವಜ್ರ ಜ್ಯುಬಿಲಿಯಂಗವಾಗಿ ಎನ್ಜಿಒ ಯೂನಿಯನ್ನಿಂದ ಮನೆ ಹಸ್ತಾಂತರ
ಕುಂಬಳೆ: ಕೇರಳ ಎನ್ಜಿಒ ಯೂನಿಯನ್ನ ವಜ್ರ ಜ್ಯುಬಿಲಿ ಯಂಗವಾಗಿ ನಿರ್ಮಿಸಿದ ಮನೆಯ ಕೀಲಿ ಕೈಯನ್ನು ಸಚಿವ ರಾಮ ಚಂದ್ರನ್ ಕಡನ್ನಪ್ಪಳ್ಳಿ ಫಲಾನುಭವಿಗೆ ನೀಡಿದರು. ಬಂಬ್ರಾಣ ನಿವಾಸಿ ಅಂದುಞಿಯವರಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಸಿ.ಎ. ಸುಬೈರ್ ಅಧ್ಯಕ್ಷತೆ ವಹಿಸಿದರು. ಎನ್ಜಿಒ ಯೂನಿಯನ್ ರಾಜ್ಯ ಉಪಾಧ್ಯಕ್ಷ ಟಿ.ಪಿ. ಉಷಾ ನಿರ್ಮಾಣ ಕಾಮಗಾರಿಗೆ ನೇತೃತ್ವ ನೀಡಿ, ಬಿ.ಕೆ. ಮೊಯ್ದೀನ್ರನ್ನು ಅಭಿನಂದಿಸಿದರು. ಕುಂಬಳೆ ಪಂ. ಅಧ್ಯಕ್ಷೆ ತಾಹಿರ ಯೂಸಫ್, ಕೆ. ಭಾನುಪ್ರಕಾಶ್, ಕೆ. ಅನಿಲ್ ಕುಮಾರ್ ಮಾತನಾಡಿದರು.
ವಜ್ರ ಜ್ಯುಬಿಲಿಯಂಗವಾಗಿ ರಾಜ್ಯದಲ್ಲಿ ಕಡು ಬಡವರಾಗಿರು ವವರಿಗೆ ೬೦ ಮನೆ, ಪಾಲಿಯೇಟಿವ್ ಚಟುವಟಿಕೆಗೆ ೧೫ ಆಂಬುಲೆನ್ಸ್ ಎಂಬಿವುಗಳನ್ನು ಎನ್ಜಿಒ ನೀಡುತ್ತಿದೆ. ಜಿಲ್ಲೆಯಲ್ಲಿ ನಿರ್ಮಿಸಿದ ಎರಡನೇ ಮನೆಯ ಹಸ್ತಾಂತರ ಈಗ ನಡೆದಿದೆ.