ವಯನಾಡು ದುರಂತ: ಕೈಜೋಡಿಸಿದ ಜಿಲ್ಲೆ
ಕಾಸರಗೋಡು: ವಯನಾಡ್ ಜಿಲ್ಲೆಯ ಮುಂಡಕೈ ಚೂರಲ್ಮಲದಲ್ಲಿ ಉಂಟಾದ ದುರಂತದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಸಂತ್ರಸ್ತರಿಗೆ ಸಹಾಯಹಸ್ತ ಹರಿದು ಬರುತ್ತಿದೆ. ಮುಖ್ಯಮಂತ್ರಿಯ ದುರಂತ ಪರಿಹಾರ ನಿಧಿಗೆ ಜಿಲ್ಲೆಯಿಂದ ಹಲವಾರು ಮಂದಿ ಸಹಾಯಹಸ್ತ ನೀಡಿದ್ದಾರೆ. ಜಿಲ್ಲಾಧಿಕಾರಿಯನ್ನು ಸಂದರ್ಶಿಸಿ ಸಿಎಂಡಿಆರ್ಎಫ್ನಿಧಿಗೆ ಸಹಾಯಹಸ್ತವನ್ನು ನೀಡಲಾಗಿದೆ. ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 95-96 ಎಸ್ಎಸ್ಎಲ್ಸಿ ಬ್ಯಾಚ್ 30,500 ರೂ. ನೀಡಿದ್ದು, ಅಧ್ಯಕ್ಷ ರತೀಶ್ ಕುಮಾರ್ ನೇತೃತ್ವದಲ್ಲಿ ಮೊತ್ತ ಹಸ್ತಾಂತರಿಸಲಾಗಿದೆ. ಕುತ್ತಿಕ್ಕೋಲ್ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಆರೇಟಿವ್ ಸೊಸೈಟಿ 25,000 ರೂ.ವನ್ನು ದೇಣಿಗೆಯಾಗಿ ನೀಡಿದ್ದು, ಅಧಕ್ಷ ಸಿ. ಬಾಲನ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಡಿವೈಎಫ್ಐ ಚೆನ್ನಿಕ್ಕರೆ ಯೂನಿಟ್ ಸಂಗ್ರಹಿಸಿದ 21,000 ರೂ.ವನ್ನು ಡಿಫಿ ಬ್ಲೋಕ್ ಅಧ್ಯಕ್ಷ ಮಿಥುನ್ ರಾಜ್ ಹಸ್ತಾಂತರಿಸಿದರು. ಚೆನ್ನಿಕ್ಕೆರೆ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಂಗ್ರಹಿಸಿದ 25,000 ರೂ.ವನ್ನು ಹಸ್ತಾಂತರಿಸಲಾಯಿತು.
ಕುತ್ತಿಕ್ಕೋಲ್ ತಂಬುರಾಟಿ ಭಗವತಿ ಕ್ಷೇತ್ರ ಸಮಿತಿ 25,000 ರೂ. ನೀಡಿದ್ದು, ಸ್ಥಾನಿಕ ಸತ್ಯನ್ ಕಾರ್ನವರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ನೀಡಲಾಗಿದೆ. 8 ವರ್ಷದ ಶಿವನ್ಯ ಎಂಬ ವಿದ್ಯಾರ್ಥಿನಿ ಹಾಗೂ 5 ವರ್ಷದ ಸಾತ್ವಿಕ್ ಎಂಬವರು ಕಳೆದ ಹಲವು ಸಮಯಗಳಿಂದ ಸಂಗ್ರಹಿಸಿಟ್ಟಿದ್ದ ನಾಣ್ಯದ ಕುಡಿಕೆಯನ್ನು ತೆಗೆದು ಜಿಲ್ಲಾಧಿಕಾರಿಗೆ ನೀಡಿದ್ದು, ಇದರಲ್ಲಿ 9870 ರೂ. ಲಭಿಸಿದೆ. ಕೆ.ವಿ. ಮಣಿ ಎಂಬವರು 10,000 ರೂ.ವನ್ನು ನಿಧಿಗೆ ಹಸ್ತಾಂತರಿಸಿದ್ದಾರೆ. ಯುಕೆಜಿ ವಿದ್ಯಾರ್ಥಿ 5 ವರ್ಷದ ಮೊಹಮ್ಮದ್ ಸ್ವಾಲಿಹ್ ಮಿಸ್ಬಾ ತನ್ನ ಇಷ್ಟದ ಆಟಿಕೆಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾನೆ. ವಯನಾಡಿನ ಶಿಬಿರಗಳಲ್ಲಿ ವಾಸಿಸುವ ಮಕ್ಕಳಿಗೆ ಆಡಲು ಇದನ್ನು ನೀಡುತ್ತಿರುವುದಾಗಿ ಆತ ಜಿಲ್ಲಾಧಿಕಾರಿಯಲ್ಲಿ ತಿಳಿಸಿದ್ದಾನೆ. ಎಲ್ಪಿಎಸ್ಟಿ ಕಾಸರಗೋಡು ರ್ಯಾಂ ಕ್ ಹೋಲ್ಡರ್ಸ್ ವತಿಯಿಂದ ಬೀನ 15,000 ರೂ. ಹಸ್ತಾಂತರಿಸಿದ್ದಾರೆ.