ವಯನಾಡು: ಭೂ ಕುಸಿತದಿಂದ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ವಯನಾಡಿನ ಚೂರಲ್‌ಮಲೆಯಿಂದ ಮುಂಡಕೈಗೆ ಸಂಪರ್ಕ ಕಲ್ಪಿಸಲು ಭಾರತೀಯ ಭೂ ಸೇನೆ ಕೇವಲ 31 ಗಂಟೆಗಳಲ್ಲಿ 190 ಅಡಿಯಲ್ಲಿ ಬೈಲಿ ಸೇತುವೆ ನಿರ್ಮಿಸಿದೆ. 140 ಯೋಧರು ಈ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿದ್ದಾರೆ. ಒಂದೇ ಬಾರಿ 24 ಟನ್ ಭಾರವನ್ನು ಸೂಕ್ತ ಸಾಗಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಸೇತುವೆ ನಿರ್ಮಿಸಲಾಗಿದೆ.
ಬೈಲಿ ಸೇತುವೆ ನಿರ್ಮಾಣದಿಂದಾಗಿ ಚೂರಲ್‌ಮಲೆ ಮತ್ತು ಮಂಡಕೈಯಲ್ಲಿ ಸಿಲುಕಿಕೊಂಡಿರುವ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಕ್ಕಿದೆ. ಈ ಸೇತುವೆ 10.90 ಅಡಿ ಅಗಲವಿದೆ.