ಪೈವಳಿಕೆ: ವಯನಾಡು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡಲು ಡಿವೈಎಫ್‌ಐ ರಾಜ್ಯ ಸಮಿತಿಯ ನಿರ್ದೇಶದಂತೆ ಪೈವಳಿಕೆ ವಿಲ್ಲೇಜ್ ಸಮಿತಿ ನೇತೃತ್ವದಲ್ಲಿ ಬಿರಿಯಾಣಿ ಚಾಲೆಂಜ್ ನಡೆಸಲಾಯಿತು. ಪೈವಳಿಕೆ ಹುತಾತ್ಮ ಸ್ಮೃತಿ ಮಂಟಪ ಪರಿಸರದಲ್ಲಿ ನಡೆದ ಬಿರಿಯಾಣಿ ಚಾಲೆಂಜ್‌ನಲ್ಲಿ ವಿವಿಧ ಭಾಗಗಳಿಂದ ಬಂದವರು ಭಾಗವಹಿಸಿದರು. ಡಿವೈಎಫ್‌ಐ ಏರಿಯಾ ಕಾರ್ಯದರ್ಶಿ ಹಾರೀಸ್ ಪೈವಳಿಕೆ ಸಿಐಟಿಯು ಮುಖಂಡ ಚಂದ್ರ ನಾಯ್ಕ್ ಮಾಣಿಪ್ಪಾಡಿಯವರಿಗೆ ಬಿರಿಯಾಣಿ ನೀಡಿ ಉದ್ಘಾಟಿಸಿದರು. ವಿಲ್ಲೇಜ್ ಕಾರ್ಯದರ್ಶಿ ಆಕಾಶ್ ಅಧ್ಯಕ್ಷತೆ ವಹಿಸಿದರು. ಅಧ್ಯಕ್ಷ ಮಹೇಶ್ ಬಾಯಿಕಟ್ಟೆ, ಸದಸ್ಯರಾದ ಸಲೀಂ, ಅಜಿತ್ ಲಾಲ್‌ಭಾಗ್, ಗಣೇಶ್, ಎಸ್‌ಎಫ್‌ಐಯ ಗೀತೇಶ್, ಸೈನಬ, ಸೌಮ್ಯ ನೇತೃತ್ವ ನೀಡಿದರು. ಸಿಮಾಂ ಡಿಸೋಜಾ, ಖಲೀಲ್ ನಾರ್ಣಕಟ್ಟೆ, ಸದಾನಂದ ಕೋರಿಕ್ಕಾರ್, ರತೀಶ್ ಸಹಕರಿಸಿದರು.
